ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಹಾಗೂ ಕಾಂಗ್ರೇಸ್ ಮುಖಂಡ ಇಸ್ಮಾಯಿಲ್ ತಮಟಗಾರ ಕೊಲೆಗೆ ಸ್ಕೆಚ್ ಹಾಕಿದ ಷಡ್ಯಂತ್ರ ಖಂಡಿಸಿ ಇಂದು ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.
ಮಧ್ಯಾಹ್ನ 3 ಘಂಟೆಗೆ ಅಂಜುಮನ್ ಆವರಣದಿಂದ ಪಕ್ಷಾತೀತ ಬೃಹತ್ ಮೌನ ಮೆರವಣಿಗೆ ಆರಂಭವಾಗಲಿದೆ.
ಕಾಂಗ್ರೇಸ್ ಜೆಡಿಎಸ್ ಹಾಗೂ ಬಿಜೆಪಿಯ ಕೆಲವರು ಮೌನ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಈಗಾಗಲೇ ಇಸ್ಮಾಯಿಲ್ ತಮಟಗಾರ ಹತ್ಯೆಗೆ ಸ್ಕೆಚ್ ಹಾಕಿದವರನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಪ್ರತಿಭಟನೆ ಶಾಂತಯುತವಾಗಿರಲಿ ಎಂದು ಅಂಜುಮನ್ ಸಂಸ್ಥೆ ಮನವಿ ಮಾಡಿದ್ದು, ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿ ತಲುಪಲಿದೆ.
