ಭಾರತೀಯ ಸೇನೆಯಲ್ಲಿ ತನ್ನ ಅಸಾಧಾರಣ ಧೈರ್ಯಕ್ಕಾಗಿ, ಕೆಂಟ್ ಹೆಸರಿನ ಶ್ವಾನವೊಂದಕ್ಕೆ ಮರಣೋತ್ತರವಾಗಿ ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿಯನ್ನು ನೀಡಲಾಗಿದೆ.
ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ತನ್ನ ನಿರ್ವಾಹಕ ( handler ) ನನ್ನು ರಕ್ಷಿಸಲು ತನ್ನ ಜೀವನವನ್ನು ತ್ಯಾಗ ಮಾಡಿತ್ತು.
ಭಾರತೀಯ ಸೇನೆಯ ಶ್ವಾನದಳದ ವೀರ ಗೋಲ್ಡನ್ ಲ್ಯಾಬ್ರಡಾರ್, ಕೆಂಟ್ ಒಂಬತ್ತು ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳ ಅನುಭವ ಹೊಂದಿತ್ತು.
ಸೆಪ್ಟೆಂಬರ್ 2023 ರಲ್ಲಿ ಜಮ್ಮುವಿನಲ್ಲಿ ನಡೆದ ಭೀಕರ ಎನ್ಕೌಂಟರ್ ಸಮಯದಲ್ಲಿ ಶತ್ರುಗಳ ಗುಂಡಿನ ದಾಳಿಯಿಂದ ತನ್ನ ಹ್ಯಾಂಡ್ಲರ್ ಅನ್ನು ರಕ್ಷಿಸಲು ಕೆಂಟ್ ಹೆಸರಿನ ಹೆಣ್ಣು ಶ್ವಾನ ತನ್ನ ನಿರ್ವಾಹಕನನ್ನು ರಕ್ಷಿಸಲು ಧೈರ್ಯದಿಂದ ತನ್ನ ಪ್ರಾಣವನ್ನು ತ್ಯಜಿಸಿದ್ದಳು.
ರಜೌರಿ ಎನ್‌ಕೌಂಟರ್ ಸಮಯದಲ್ಲಿ, 21 ಆರ್ಮಿ ಡಾಗ್ ಯೂನಿಟ್‌ನ ಆರು ವರ್ಷದ ಹೆಣ್ಣು ಲ್ಯಾಬ್ರಡಾರ್ ಭಾರತೀಯ ಸೇನೆಯ ನಾಯಿ ಕೆಂಟ್, ಜಮ್ಮು ಕಾಶ್ಮೀರನಲ್ಲಿನ ಕಾರ್ಯಾಚರಣೆಯ ಸಮಯದಲ್ಲಿ ಅದರ ಹ್ಯಾಂಡ್ಲರ್ ಅನ್ನು ರಕ್ಷಿಸುವಾಗ ವೀರಗತಿಯನ್ನು ಪಡೆದುಕೊಂಡಿತ್ತು.
ಅತ್ಯಂತ ಪರಿಣಿತಿ ಹೊಂದಿದ್ದ ಕೆಂಟ್, ಭಯೋತ್ಪಾದಕರ ಜಾಡು ಹಿಡಿದು ಸೈನಿಕರ ಜೊತೆ ಸೇನೆಯನ್ನು ಮುನ್ನಡೆಸುತ್ತಿತ್ತು.
ವೀರಗತಿ ಹೊಂದಿರುವ ಕೆಂಟನ ಅಸಾಧಾರಣ ಸಾಹಸಕ್ಕೆ ರಾಷ್ಟ್ರಪತಿಗಳ ಮರಣೋತ್ತರ ಶೌರ್ಯ ಪ್ರಶಸ್ತಿ ಸಿಕ್ಕಿದೆ.
