ಎಣ್ಣೆ ಹೊಡೆದರೆ ಸಾಕು ಹುಲಿ ಅಂತ ಆಡ್ತಾರೆ ಅನ್ನೋದು ತಮಾಷೆಯ ಮಾತು. ಆ ಹೆಸರಿಗೆ ತಕ್ಕಂತೆ “ಹುಲಿ ” ಹೆಸರಿನ ಬೆಲ್ಲದಿಂದ ಮಾಡಿದ “ರಮ್” ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ನಂಜನಗೂಡಿನಲ್ಲಿ ತಯಾರಾಗಿರುವ ಈ ಬೆಲ್ಲದ “ರಮ್ ” ಗೆ “ಹುಲಿ” ಎಂದು ಹೆಸರಿಡಲಾಗಿದೆ. ಸತತ 8 ವರ್ಷಗಳ ಕಾಲ ಅನ್ವೇಷಣೆ ಮಾಡಿ, ಇದೀಗ ಹುಲಿ ರಮ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಇದು ಭಾರತದ ಮೊದಲ ಬೆಲ್ಲದ ರಮ್ ಆಗಿದ್ದು, ಇದರ ಬೆಲೆ ನೋಡಿದರೆ, ‘ಇದು ಬಡವರು ಕುಡಿಯೋ ಹಾಗಿಲ್ಲ.
750ml ನ ಒಂದು ಬಾಟಲಿಯ ಬೆಲೆ 630 ರೂಪಾಯಿ ನಿಗದಿ ಮಾಡಲಾಗಿದೆ. ಅಬಕಾರಿ ಸುಂಕ ಮತ್ತು ಚಿಲ್ಲರೆ ವ್ಯಾಪಾರಿಗಳ ಮಾರ್ಜಿನ್ ಅನ್ನು ಸೇರಿಸಿದರೆ ಅದರ ಬೆಲೆ, 2,800 ರೂಪಾಯಿ ಆಗಲಿದೆ.