ನಾವಿವತ್ತು ಸುರಕ್ಷಿತವಾಗಿದ್ದೀವಿ .. ನೆಮ್ಮದಿಯಾಗಿದಿವಿ ಅಂದ್ರೆ ಅದಕ್ಕೆ ಗಡಿಯಲ್ಲಿ ನಮಗಾಗಿ ಹಗಲಿರುಳು ಹೋರಾಡ್ತಿರೋ ಸೈನಿಕರು.. ಹಾಗೆನೇ ದೇಶದ ಸುರಕ್ಷತೆಗಾಗಿ ತಮ್ಮ ವಯಕ್ತಿಕ ಬದುಕನ್ನು ತ್ಯಾಗ ಮಾಡಿ, ತೆರೆಮರೆಯಲ್ಲೇ ದೇಶಸೇವೆ ಮಾಡ್ತಿರೋರು ಸಿಕ್ರೇಟ್ ಏಜೆಂಟ್ ಗಳು. ಚಾಲೆಂಜಿಂಗ್ ಸನ್ನಿವೇಶಗಳಲ್ಲಿ ದೇಶಕ್ಕಾಗಿ ಪ್ರಾಣವನ್ನೇ ಮುಡುಪಾಗಿಟ್ಟ ಸಿಕ್ರೇಟ್ ಏಜೆಂಟ್ ಗಳ ಬದುಕಿನ ವಿಶೇಷ ಕಾರ್ಯಕ್ರಮ ಏಜೆಂಟ್- 001.
ದಿ ಲೀಡರ್ ಖ್ಯಾತಿಯ ನಿರೂಪಕ, ನ್ಯೂಸ್ ಫಸ್ಟ್ ಕನ್ನಡ ಸಿಇಓ ಎಸ್ ರವಿಕುಮಾರ. ಎಜೆಂಟ್ ೦೦1 ಕಾರ್ಯಕ್ರಮ ನಿರೂಪಿಸಿದ್ದಾರೆ.. ಅತ್ಯಂತ ಕುತುಹಲಕಾರಿ ಈ ಕಾರ್ಯಕ್ರಮವನ್ನು ಅಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ನೋಡಲೇಬೇಕಾದ ಈ ಕಾರ್ಯಕ್ರಮ ಪ್ರತಿ ಶನಿವಾರ ಸಂಜೆ 7 ಗಂಟೆಗೆ ಹಾಗೂ ಭಾನುವಾರ ಬೆಳಿಗ್ಗೆ 11 ಗಂಟೆಗೆ ನ್ಯೂಸ್ ಫಸ್ಟ್ ಕನ್ನಡದಲ್ಲಿ ಪ್ರಸಾರವಾಗಲಿದೆ.. ತಪ್ಪದೇ ವೀಕ್ಷಿಸಿ…