ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿದಂತೆ ಎರಡು ಕ್ಷೇತ್ರಗಳಿಗೆ ಎ ಐ ಸಿ ಸಿ ಅಧಿಕೃತ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಶಿಗ್ಗಾವ ಕ್ಷೇತ್ರವೊಂದನ್ನು ಬಿಟ್ಟು ಉಳಿದ ಎರಡು ಕ್ಷೇತ್ರಗಳ ಅಭ್ಯರ್ಥಿ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
ಸಂಡೂರ ಕ್ಷೇತ್ರಕ್ಕೆ ಸಂಸದ ತುಕಾರಾಮ ಅವರ ಧರ್ಮಪತ್ನಿ ಇ ಅನ್ನಪೂರ್ಣ ಮತ್ತು ಚನ್ನಪಟ್ಟಣ ಕ್ಷೇತ್ರಕ್ಕೆ ಸಿ ಪಿ ಯೋಗೇಶ್ವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ಇಂದು ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ಆಸ್ಸಾಮ್ ರಾಜ್ಯದ ಬೆಹಾಲಿ ಕ್ಷೇತ್ರಕ್ಕೆ ಜಯಂತ ಬೋಹರಾ ಹೆಸರನ್ನು ಪ್ರಕಟಿಸಲಾಗಿದೆ.
ಶಿಗ್ಗಾವ ಕ್ಷೇತ್ರದ ಟಿಕೇಟ್ ಗಾಗಿ ಹಗ್ಗಜಗ್ಗಾಟ ನಡೆದಿದ್ದು, ಬೆಳಿಗ್ಗೆ ಅಧಿಕೃತ ಅಭ್ಯರ್ಥಿಯ ಹೆಸರು ಪ್ರಕಟವಾಗುವ ಸಾಧ್ಯತೆ ಇದೆ
