ಮೈಸೂರಿನ ” ಮೂಡಾ ” ನಂತರ ಹುಬ್ಬಳ್ಳಿ ಧಾರವಾಡದ ” ಹುಡಾ ” ದೊಡ್ಡ ಸೌಂಡ ಮಾಡುತ್ತಿದೆ. ಬಗೆದಷ್ಟು ದೊಡ್ಡ ಮಟ್ಟದ ಅವ್ಯವಹಾರ ಬಯಲಿಗೆ ಬರುತ್ತಿವೆ.
ಜಗದೀಶ ಶೆಟ್ಟರ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ “ಹುಡಾ” ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ 32 ಕೋಟಿ ರೂಪಾಯಿ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಅನುದಾನ ಸೋರಿಕೆಯಾಗಿದೆ ಎಂಬ ಅನುಮಾನ ಮೂಡಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಲ್ಲಬೇಕಿದ್ದ ಅಧಿಕಾರಿಗಳು, ರೊಕ್ಕ ಎನಿಸುವದರಲ್ಲಿಯೇ ಕಾಲ ಕಳೆದಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ. ಹುಡಾ ಅಧ್ಯಕ್ಷರಾಗಿ ಹೊಸದಾಗಿ ನೇಮಕಗೊಂಡಿರುವ ಶಾಕೀರ ಸನದಿಯವರು 32 ಕೋಟಿ ವೆಚ್ಚದಲ್ಲಿ ಆಗಿರುವ ಕೆರೆಗಳ ಅಭಿವೃದ್ಧಿ ಕಾಮಗಾರಿ ಬಗ್ಗೆ ಸ್ಥಳಕ್ಕೆ ಹೋಗಿ ವಿಚಾರಿಸಬೇಕಿದೆ.
ಸ್ಮಾರ್ಟ ಸಿಟಿ ಯೋಜನೆಯಡಿ ತೋಳನಕೆರೆ ಅಭಿವೃದ್ಧಿ ಪಡಿಸಲಾಗಿದ್ದು, “ಹುಡಾ” ಯಾವ ಕೆರೆಗಳ ಮತ್ತು ಉದ್ಯಾನವನದ ಅಭಿವೃದ್ಧಿಗೆ ಹಣ ಖರ್ಚು ಮಾಡಿದೆ ಅನ್ನೋದು ಗೊತ್ತಾಗಬೇಕಿದೆ.