ಕಳ್ಳರು ಈಗ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ ಇಲಾಖೆ ಸೈಬರ ಅಪರಾಧ ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಅದರಲ್ಲೂ ಪ್ರಮುಖವಾಗಿ ವಿದ್ಯಾವಂತರು ಸೈಬರ ಕಳ್ಳರ ಕೈಚಳಕಕ್ಕೆ ಕಂಗಾಲಾಗಿದ್ದಾರೆ.
+96981028287 ನಂಬರಿನಿಂದ ಹಿಂದಿ ಭಾಷೆಯಲ್ಲಿ ಮುದ್ರಿತ ದ್ವನಿಯೊಂದು,
ನಿಮ್ಮ ಮೊಬೈಲ್ ಸಂಖ್ಯೆಯಿಂದ ಬೆದರಿಕೆ ಹಾಕಲಾಗಿದೆ, ನಿಮ್ಮ ಮೇಲೆ ಕೇಸು ಹಾಕಲಾಗಿದೆ ಎಂದು ಹೇಳಿ ಸಂಖ್ಯೆ 9 ಅನ್ನು ಒತ್ತಿ ಎಂದು ಹೇಳುತ್ತದೆ.
ಅವರು ಹೇಳಿದ ಸಂಖ್ಯೆಯನ್ನು ಒತ್ತಿದರೆ ಸಾಕು, ನಿಮ್ಮ ಅಕೌಂಟನಲ್ಲಿರುವ ಎಲ್ಲಾ ಹಣವನ್ನು ಕ್ಷಣಾರ್ಧದಲ್ಲಿ ಖಾಲಿ ಮಾಡುತ್ತಾರೆ.
ವಿಧ್ಯಾವಂತರೆ ಹೆಚ್ಚು ಇಂತಹ ಕೃತ್ಯಗಳಲ್ಲಿ ಸಿಕ್ಕು ಒದ್ದಾಡುತ್ತಿದ್ದರೆ, ಒಂದು ವೇಳೆ ಭಯ ಹುಟ್ಟಿಸುವ ಮತ್ತು ಬೆದರಿಕೆ ಹಾಕುವ ಕರೆಗಳು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಿ. ಅನಾಮಧೇಯ ಕರೆಗಳನ್ನು ಸ್ವೀಕರಿಸಲು ಹೋಗಲೇಬೇಡಿ.