ಹುಬ್ಬಳ್ಳಿಯ ಸರಕು ಮತ್ತು ಸೇವಾ ತೆರಿಗೆ ಇಲಾಖೆ ( ವಾಣಿಜ್ಯ ತೆರಿಗೆ ) ಯಲ್ಲಿ ನಕಲಿ ಅಧಿಕಾರಿಗಳ ಹಾವಳಿ ಮಿತಿಮೀರಿದೆ.
ಸಂತೋಷ ಎಂಬಾತ ತಾನು ವಾಣಿಜ್ಯ ತೆರಿಗೆ ಇಲಾಖೆಯ ಇನ್ಸಪೆಕ್ಟರ ಎಂದು ಹೇಳಿ ಸರಕು ವಾಹನಗಳನ್ನು ನಿಲ್ಲಿಸಿ ಹಣ ವಸೂಲಿ ಮಾಡುವ ಆರೋಪ ಕೇಳಿ ಬಂದಿದೆ.
ಕೇರಳ ಮೂಲದ ಸರಕು ವಾಹನದ ಮಾಲೀಕನ ಕಡೆಯಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಾರೆ. ಸಂತೋಷ ಎಂಬಾತ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ( CTO ) ಎಮ್ ಟಿ ನಾಯಕ ಅವರ ವಾಹನದಲ್ಲಿ ಕುಳಿತು ಡೀಲ್ ಮಾಡುತ್ತಿದ್ದಾನೆ ಎನ್ನಲಾಗಿದೆ.
ಸರಕು ವಾಹನಗಳನ್ನು ನಿಲ್ಲಿಸುವ ಈತ ತನ್ನ ಮೊಬೈಲ್ ಸಂಖ್ಯೆ 6360923278 ದಿಂದ ಮಾತಾಡಿ, ಡೀಲ್ ಕುದುರಿಸುತ್ತಿದ್ದಾನೆ. ಕಳೆದ ಒಂದು ವಾರದಲ್ಲಿ ಮೂರು ಬಾರಿ ಡೀಲ್ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ವಾಣಿಜ್ಯ ತೆರಿಗೆ ಇಲಾಖೆ ( ಜಾರಿ ) ಜಂಟಿ ಆಯುಕ್ತ, ರವಿಕುಮಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೆ ಹೋದಲ್ಲಿ, ಮತ್ತಷ್ಟು ಇಂತಹ ಘಟನೆಗಳು ಮರುಕಳಿಸುವಲ್ಲಿ ಎರಡು ಮಾತಿಲ್ಲ