ಬದಲಾದ ಹವಾಮಾನ ಧಾರವಾಡಿಗರನ್ನು ಕೆಮ್ಮುವಂತೆ ಮಾಡಿದೆ. ಧಾರವಾಡ ಈಗ ಕೆಮ್ಮುತ್ತಿದೆ.
ಮಲೆನಾಡು ಸೆರಗು ಹೊದ್ದುಕೊಂಡಿರುವ ಧಾರವಾಡದಲ್ಲಿ ಒಂದೇ ಸಮನೆ ಶೀತಗಾಳಿ ಬೀಸುತ್ತಿದೆ. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರು ಇದೀಗ ಕೆಮ್ಮುತ್ತಿದ್ದಾರೆ.
ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಜಾಸ್ತಿಯಾಗಿದೆ.
ಕೆಮ್ಮು, ನೆಗಡಿ ಸರ್ವೇ ಸಾಮಾನ್ಯವಾಗಿದ್ದು, ಒಮ್ಮೆ ಹತ್ತಿದ ಕೆಮ್ಮು, 10 ದಿನಗಳಾದರು ನಿಯಂತ್ರಣಕ್ಕೆ ಬರುತ್ತಿಲ್ಲ.
ಕೆಮ್ಮು ಹಾಗೂ ನೆಗಡಿ ಕೋವಿಡ್ ಸಂದರ್ಭವನ್ನು ನೆನಪಿಸುತ್ತಿದ್ದು, ಜನ ಮನೆ ಮದ್ದಿನಲ್ಲಿ ತೊಡಗಿದ್ದಾರೆ.
