ಅಣ್ಣಿಗೇರಿ ತಾಲೂಕಿನ ಅಡ್ನೂರ ಗ್ರಾಮದಲ್ಲಿ 2025 ನೇ ಜನವರಿ 20 ರಂದು ಜರಗಲಿರುವ ಅಣ್ಣಿಗೇರಿ ತಾಲೂಕು ಮಟ್ಟದ ಶರಣ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಲು ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ ಹಾರನಹಳ್ಳಿ ಕೋಡಿಮಠ ಮಹಾಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಒಪ್ಪಿಗೆ ನೀಡಿದ್ದಾರೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಣ್ಣಿಗೇರಿ ತಾಲೂಕು ಘಟಕದ ಅಧ್ಯಕ್ಷ ಎನ್.ಎಂ. ಯಲಬುರ್ಗಿ ಅವರ ನೇತೃತ್ವದಲ್ಲಿ ಭೇಟಿಯಾದ ನಿಯೋಗದ ಬಿನ್ಹಹಕ್ಕೆ ಕೋಡಿಮಠ ಶ್ರೀಗಳು ಈ ಒಪ್ಪಿಗೆ ನೀಡಿದರು.
ಇದೇ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಅಡ್ನೂರಿನವರೇ ಆದ ಖ್ಯಾತ ಪ್ರವಚನಕಾರ, ಕಲಾವಿದ ಶರಣ ಶ್ರೀ ಎಂ. ಕಲ್ಲಿನಾಥ ಶಾಸ್ತ್ರಿ ಅವರಿಗೆ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪಾಲ್ಗೊಳ್ಳಲು ಆಮಂತ್ರಿಸಿ ಕೋಡಿಮಠ ಶ್ರೀಗಳ ಮುಖಾಂತರ ಅಧಿಕೃತ ಆಮಂತ್ರಣ ನೀಡಲಾಯಿತು.
ನಿಯೋಗದಲ್ಲಿ ವೀರೇಶ ಶಾನುಭೋಗರ, ಪಿ.ಕೆ. ಕೋಕಾಟೆ, ಲಿಂಗನಗೌಡ ಪಾಟೀಲ ಹಾಗೂ ಚಂದ್ರಶೇಖರ ಸುರಕೋಡ ಇದ್ದರು.