ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಬದಾಮಿ ತಾಲೂಕಿನ ಯಂಡಿಗೇರಿ ಗ್ರಾಮ ದಲ್ಲಿ ಸೊಸೆಯ ಕೊಲೆ ಮಾಡಲು ಅತ್ತೆ, ಮಾವ ನಡೆಸಿದ ಸಂಚು ಬಟಾ ಬಯಲಾಗಿದೆ.
ಯಂಡಿಗೇರಿ ಗ್ರಾಮದ ಮುತ್ತಕ್ಕಾ ಪೂಜಾರಿ ಎಂಬಾಕೆಯನ್ನು ಕೊಲೆ ಮಾಡಿದ ಬಳಿಕ ಆಕೆಯ ಶವವನ್ನು ಹೂಳಲು ಮಾವ ರಾಮಪ್ಪ, ಅತ್ತೆ ಪಾರ್ವತಿ ತೋಟದ ಮನೆಯಲ್ಲಿ ಗುಂಡಿ ತೋಡಿದ್ದು ಬೆಳಕಿಗೆ ಬಂದಿದೆ.
ಮುತ್ತಕ್ಕನ ಪತಿ ತೀರಿಕೊಂಡು 5 ವರ್ಷಗಳಾಗಿದ್ದು, ಗಂಡನನ್ನು ಕಳೆದುಕೊಂಡ ಬಳಿಕ ಮುತ್ತಕ್ಕ, ಮಾವ ಹಾಗೂ ಅತ್ತೆಯ ಜೊತೆಗೆ ಇದ್ದಳು. ಇದ್ದಕ್ಕಿದ್ದಂತೆ ಆಸ್ತಿಯ ಪಾಲಿನ ವಿಚಾರ ಬಂದಾಗ ಮಾವ ಮತ್ತು ಅತ್ತೆ, ಸೊಸೆಯನ್ನು ಮುಗಿಸಲು ಹೊಂಚು ಹಾಕಿದರು ಎನ್ನಲಾಗಿದೆ.
ಇದಕ್ಕಾಗಿಯೇ ಮುತ್ತಕ್ಕಳಿಗೆ ಕಳೆದ ವಾರ ಬೇರೆ ಮನೆ ಮಾಡಿಕೊಟ್ಟಿದ್ದ ಮಾವ ಹಾಗೂ ಅತ್ತೆ, ಸೂಸೆಯನ್ನು ಕೊಲೆ ಮಾಡಿದ ಬಳಿಕ ತೋಟದ ಮನೆಯಲ್ಲಿಯೇ ಹೂಳಲು ಗುಂಡಿ ತೋಡಿದ್ದು, ಮುತ್ತಕ್ಕಳಿಗೆ ಗೊತ್ತಾಗಿದೆ.
ಸದ್ಯ ಈ ಸುದ್ದಿ ಕೆರೂರ ಪೊಲೀಸರಿಗೆ ಗೊತ್ತಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ, ಅತ್ತೆ ಹಾಗೂ ಮಾವನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇತ್ತ ಮುತ್ತಕ್ಕಳ ಪಾಲಕರು, ಮಗಳ ಕೊಲೆಗೆ ಸಂಚು ಮಾಡಿದ್ದಾರೆಂದು ಆರೋಪಿಸಿದ್ದಾರೆ.