ಪಂಚಮಸಾಲಿ ಹೋರಾಟದ ಸಂದರ್ಭದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಪಂಚಮಸಾಲಿ ಮೀಸಲಾತಿ ಹೋರಾಟದ 23 ಜನರ ವಿರುದ್ಧ ಕೇಸ್ ಧಾಖಲು ಮಾಡಲಾಗಿದೆ.
ಸುವರ್ಣ ಸೌಧಕ್ಕೆ ಮುತ್ತಿಗೆ ಯತ್ನ ಹಾಗೂ ಜನರಿಗೆ ಪ್ರಚೋದನೆ ನೀಡಿರುವ ಆರೋಪ ಹೊರಿಸಲಾಗಿದೆ.
ಪ್ರತಿಭಟನೆ ವೇಳೆ, ರಾಷ್ಟ್ರೀಯ ಹೆದ್ದಾರಿ ಬಳಿ ಹಾಕಿದ್ದ ಬ್ಯಾರಿಕೆಟ್ ತಳ್ಳಿ, ಪೊಲೀಸರ ಮೇಲೆ ಕಲ್ಲು, ಚಪ್ಪಲಿ ಎಸೆದಿರುವ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಸುವರ್ಣಸೌಧದ ಎದುರು ನಡೆದ ಗಲಭೆಯಲ್ಲಿ ಸಾರ್ವಜನಿಕ ಹಾಗೂ ಪೊಲೀಸ್ ವಾಹನಗಳು ಜಖಂಗೊಂಡಿವೆ. ಕಲ್ಲು ತೂರಾಟದಿಂದಾಗಿ ಪೊಲೀಸರಿಗೆ ಗಾಯಗಳಾಗಿವೆ.
ಗಲಭೆಯಲ್ಲಿ ಪಾಲ್ಗೊಂಡವರ ವಿರುದ್ಧ ವಿವಿಧ ಕಲಂ ಅಡಿಯಲ್ಲಿ ಹೋರಾಟಗಾರರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.