ಹುಬ್ಬಳ್ಳಿಯ ಪ್ರತಿಷ್ಟಿತ ಐ ಟಿ ಪಾರ್ಕನಲ್ಲಿ ದ್ವಿಚಕ್ರ ವಾಹನ ನಿಲುಗಡೆ ಪ್ರದೇಶದಲ್ಲಿ ಪುಂಡರ ಹಾವಳಿಗೆ ಜನರ ರೋಸಿ ಹೋಗಿದ್ದಾರೆ.
ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳ ಸೀಟುಗಳನ್ನು ಬ್ಲೇಡ್ ನಿಂದ ಕತ್ತರಿಸಲಾಗುತ್ತಿದೆ. ಪ್ರತಿ ದಿನ ಇಂತಹ ಘಟನೆಗಳು ನಡೆಯುತ್ತಿದ್ದು, ಬೈಕ್ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐ ಟಿ ಪಾರ್ಕ್ ನಲ್ಲಿ ವಾಹನ ಪಾರ್ಕಿಂಗ್ ಮಾಡಲು ಹಣ ಪಾವತಿ ಮಾಡಿದರು, ವಾಹನಗಳು ಸುರಕ್ಷಿತವಾಗಿಲ್ಲ, ಬೈಕ್ ಗಳ ಸೀಟಗಳನ್ನು ಹರಿಯಲಾಗುತ್ತಿದೆ ಎಂದು ಬೈಕ್ ಸವಾರರು ಪೊಲೀಸರ ಗಮನಕ್ಕೆ ತಂದಿದ್ದಾರೆ.