ಬಿಜೆಪಿ ಡಾ, ಬಾಬಾಸಾಹೇಬ ಅಂಬೇಡ್ಕರ ಅವರನ್ನು ಗೌರವಿಸಿದ್ದಷ್ಟು ಕಾಂಗ್ರೇಸ್ ಗೌರವಿಸಿಲ್ಲ ಎಂದು ಮಹಾನಗರ ಬಿಜೆಪಿ ಎಸ್ ಸಿ ಎಸ್ ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಹುಲ್ ಮಲ್ಲಿಗವಾಡ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಡಾ, ಬಾಬಾಸಾಹೇಬ ಅಂಬೇಡ್ಕರರ ಕುರಿತು ಮಾತನಾಡಿರುವ ಗೃಹ ಸಚಿವ ಅಮಿತ್ ಶಾ ಮೇಲೆ ಮುಗಿಬಿದ್ದಿರುವ ಕಾಂಗ್ರೇಸ್, ಇದೀಗ ಅಂಬೇಡ್ಕರ ಅವರನ್ನು ಗುಣಗಾಣ ಮಾಡುತ್ತಿದೆ. ಅವರಿಗೆ ಕಾಂಗ್ರೇಸ್ಸಿನಿಂದ ಬಹಳಷ್ಟು ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿರುವ ರಾಹುಲ್, ಬಿಜೆಪಿ ಅವರನ್ನು ದೇವರ ಸ್ಥಾನದಲ್ಲಿ ಸ್ಮರಿಸುತ್ತದೆ ಎಂದು ತಿಳಿಸಿದ್ದಾರೆ.