ರೈತ ಬಂಡಾಯದ ನಾಡು ನವಲಗುಂದ ಇದೀಗ ದೋ ನಂಬರ್ ದಂಧೆಗೆ ಹೇಳಿ ಮಾಡಿಸಿದಂತಿದೆ.
ಆಕ್ರಮ ಸಾರಾಯಿಗೆ ಫೇಮಸ್ ಆಗಿದ್ದ ಹುಬ್ಬಳ್ಳಿ ಕಮರಿಪೇಟೆ, ಸುಧಾರಿಸ ತೊಡಗಿದ್ದರೆ, ನವಲಗುಂದದಲ್ಲಿ ಮಾತ್ರ 24 ಘಂಟೆ ಸಾರಾಯಿ ಸುಲಭವಾಗಿ ಸಿಗುತ್ತದೆ.
ಹುಬ್ಬಳ್ಳಿಯಿಂದ ನವಲಗುಂದಕ್ಕೆ ಎಂಟ್ರಿಯಾಗುತ್ತಿದ್ದಂತೆ ಸಾರಾಯಿ ವಾಸನೆ ಬಡೆಯುತ್ತದೆ. ನವಲಗುಂದದಿಂದ ಹಳ್ಳಿಗಳಿಗೂ ಸಾರಾಯಿ ಸಾಗಾಟವಾಗುತ್ತದೆ.
ಆಕ್ರಮ ಸಾರಾಯಿ ಮಾರಾಟ ಗೊತ್ತಿದ್ದು, ಅಬಕಾರಿ ಇಲಾಖೆಯ ಅಧಿಕಾರಿಗಳು ಸುಮ್ಮನೇ ಕುಳಿತಿರುವದು ಸಂಶಯಕ್ಕೆಡೆ ಮಾಡಿದೆ.
ಕಳೆದ 6 ತಿಂಗಳಲ್ಲಿ ಕುಡಿತದ ಚಟಕ್ಕೆ, ನವಲಗುಂದ ನಗರದಲ್ಲಿಯೇ 5 ಕ್ಕೂ ಹೆಚ್ಚು ಯುವಕರು ಬಲಿಯಾಗಿದ್ದಾರೆ. ದಿನದ 24 ತಾಸು, ಸಾರಾಯಿ ಸಿಗುವದರಿಂದ, ಯುವಕರು ದಾರಿ ತಪ್ಪುತ್ತಿದ್ದಾರೆ.
ಆಕ್ರಮ ಸಾರಾಯಿ ಜೊತೆ ನವಲಗುಂದದಲ್ಲಿ ಓ ಸಿ, ಇಸ್ಪೇಟ್, ಗಾಂಜಾ ಹಾವಳಿ ಮಿತಿ ಮೀರಿದೆ. ಈ ವಿಷಯ ಕ್ರೈಮ್ ಹಾಗೂ ಎಸ್ ಬಿ ಡ್ಯೂಟಿ ಮಾಡುವ ಕೆಲ ಪೊಲೀಸರಿಗೂ ಗೊತ್ತಿದೆ.
ಶಾಂತಿ, ಸೌಹಾರ್ಧತೆಗೆ ಹೆಸರಾದ, ಧಾರವಾಡ ಜಿಲ್ಲೆಯ ನವಲಗುಂದ, ಕ್ರಮೇಣ ಹದಗೆಡುತ್ತಿದೆ. ಶಾಸಕ ಎನ್ ಎಚ್ ಕೋನರೆಡ್ಡಿಯವರು, ಅಧಿಕಾರಿಗಳ ಸಭೆ ಕರೆದು, ಬೆಂಬಲಿಗರು, ಅಭಿಮಾನಿಗಳು ಎಂದು ನೋಡದೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಲ್ಲಿ ನವಲಗುಂದ ಸುಧಾರಣೆ ಕಾಣಬಹುದು.
ಅಬಕಾರಿ, ಪೊಲೀಸ್ ಅಧಿಕಾರಿಗಳು, ವರ್ಗಾವಣೆಯಾಗಿ ಬರಲು ಹಣ ಕೊಟ್ಟು ಬಂದಾಗ ಇವೆಲ್ಲ ಸಹಜ ಅಂತಾ ಜನ ಮಾತನಾಡಿಕೊಳ್ಳುವ ಮುನ್ನ ಶಾಸಕರು ಎಚ್ಚೆತ್ತುಕೊಳ್ಳಲಿ. ಅಧಿಕಾರಿಗಳ ಸಭೆ ನಡೆಸಿ, ಯುವಕರ ಜೀವ ಉಳಿಸಲಿ.