Download Our App

Follow us

Home » ಕರ್ನಾಟಕ » ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಕುಂಠಿತ. ಬೆಂಗಳೂರಿಗೆ ವಲಸೆ ಹೋಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ. ಬೆಂಗಳೂರಿಗೆ ವಲಸೆ ಹೋಗಿರುವವರ ಸಂಖ್ಯೆ 2.4 ಲಕ್ಷ….

ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಕುಂಠಿತ. ಬೆಂಗಳೂರಿಗೆ ವಲಸೆ ಹೋಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ. ಬೆಂಗಳೂರಿಗೆ ವಲಸೆ ಹೋಗಿರುವವರ ಸಂಖ್ಯೆ 2.4 ಲಕ್ಷ….

ರಾಜ್ಯವು ವೇಗವಾಗಿ ನಗರೀಕರಣಗೊಳ್ಳುತ್ತಿರುವಂತೆ (ಬೆಂಗಳೂರು) ಕರ್ನಾಟಕದ ಉತ್ತರ ಜಿಲ್ಲೆಗಳ ಜನರು ತಮ್ಮ ಕನಸುಗಳನ್ನು ನನಸಾಗಿಸಲು ಬೆಂಗಳೂರು ನಗರಕ್ಕೆ ತೆರಳುತ್ತಿದ್ದಾರೆ. 

ಕೇವಲ ಬಡವರಲ್ಲ, ಎಲ್ಲಾ ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆಯ ಜನರು ತಮ್ಮ ಊರುಗಳಿಗೆ ವಿದಾಯ ಹೇಳುತ್ತಿದ್ದಾರೆ. 

ರಾಜಧಾನಿ ಮತ್ತು ರಾಜ್ಯದ ಉಳಿದ ನಗರಗಳ ಜನಸಂಖ್ಯೆಯ ನಡುವೆ ಅಗಾಧ ವ್ಯತ್ಯಾಸವುಂಟಾಗಿದೆ. ಈ ಅಂತರ ಪ್ರತಿ ವರ್ಷವೂ ಹೆಚ್ಚುತ್ತಲೇ ಇದೆ.

ಸ್ಟ್ರೀಟ್ ಫ್ರಾಂಟಿಯರ್ ಇತ್ತೀಚಿಗೆ ನಡೆಸಿದ ಅಧ್ಯಯನದ ಪ್ರಕಾರ, 2001 ರಿಂದ 2011 ರವರೆಗೆ, ಗ್ರಾಮೀಣ ಜನಸಂಖ್ಯೆಯ ಪ್ರಮಾಣವು 66% ರಿಂದ 61% ಕ್ಕೆ ಕಡಿಮೆಯಾಗಿದೆ. ಮತ್ತು ನಗರ ಜನಸಂಖ್ಯೆಯು 34% ರಿಂದ 39% ಕ್ಕೆ ಏರಿದೆ. 

ಈ ವರ್ಷ ಉತ್ತರ ಕರ್ನಾಟಕದಿಂದ ವಲಸೆ ಬಂದ ಮತದಾರರನ್ನು ಪತ್ತೆ ಹಚ್ಚಲು ಚುನಾವಣಾ ಆಯೋಗ ಪ್ರಯತ್ನಿಸಿದೆ. ಬೆಂಗಳೂರಿನಲ್ಲಿ ಸುಮಾರು 2.4 ಲಕ್ಷ ವಲಸೆ ಮತದಾರರು ನಗರಕ್ಕೆ ವಲಸೆ ಹೋಗಿದ್ದಾರೆ ಅನ್ನೋದು ಬೆಳಕಿಗೆ ಬಂದಿದೆ. 

ಈ ಸಾಮೂಹಿಕ ವಲಸೆಗೆ ಕಾರಣವೇನು? 

ಎಲ್ಲಾ ಸರ್ಕಾರಗಳು ಬೆಂಗಳೂರು ಮತ್ತು ಅದರ ಸುತ್ತಮುತ್ತ ಹೂಡಿಕೆಗೆ ಒಲವು ತೋರಿರುವದು.

ಬೆಂಗಳೂರನ್ನು ಹಣದ ಕಮಾಯಿ ಮಾಡುವ ಸ್ಥಳ ಎಂದು ಜನ ಭಾವಿಸಿರುವದು.

ದೊಡ್ಡ ದೊಡ್ಡ ಕೈಗಾರಿಕೆಗಳನ್ನು ತರಲು ಉತ್ತರ ಕರ್ನಾಟಕದ ರಾಜಕಾರಣಿಗಳಿಗೆ ರಾಜಕೀಯ ಇಚ್ಚಾಶಕ್ತಿ ಇಲ್ಲದಿರುವದು.

 ಆಗಾಗ ಬೆಳಕು ಚೆಲ್ಲುತ್ತಿರುವ ಅರವಿಂದ ಬೆಲ್ಲದ 

ಅಭಿವೃದ್ಧಿ ವಿಷಯದ ಮೇಲೆ ಬೆಳಕು ಚೆಲ್ಲಿದ ಬಿಜೆಪಿ ಶಾಸಕ, ಅರವಿಂದ್ ಬೆಲ್ಲದ ಅವರು, ಉತ್ತರ ಕರ್ನಾಟಕದ ಕಳಪೆ ಅಭಿವೃದ್ಧಿ ಬಗೆಗಿನ ದುಃಸ್ಥಿತಿ, ಹಾಗೂ ಅಸಮಾನತೆಯನ್ನು ಎತ್ತಿ ತೋರಿಸಿದ್ದಾರೆ. 

ಉತ್ತರ ಕರ್ನಾಟಕದ ಡ್ರೈವರ್ ಗಳು ಸಹ ಇದೀಗ ಉತ್ತರ ಕರ್ನಾಟಕದಲ್ಲಿ ಕೆಲಸವಿಲ್ಲದೆ ಬೆಂಗಳೂರಿಗೆ ವಲಸೆ ಹೋಗಿದ್ದಾರೆ. ಅಲ್ಲಿ ಆಕರ್ಷಕ ಸಂಬಳ ಪಡೆಯಲು, ಬೆಂಗಳೂರನ್ನು ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದಾರೆ. 

ಅನೇಕ ಸಣ್ಣ ರೈತರು ಮತ್ತು ರೈತರ ಮಕ್ಕಳು, ಕೃಷಿಯನ್ನು ಲಾಭದಾಯಕ ವೃತ್ತಿಯಾಗಿ ಮಾಡಿಕೊಳ್ಳಲು ಹೆಣಗಾಡಿ ಕಡೆಗೆ, ಅವಕಾಶಗಳು ಮತ್ತು ಗಳಿಸುವ ಸಾಮರ್ಥ್ಯ ಇರುವುದರಿಂದ, ಅವರು ಉತ್ತಮ ಜೀವನದ ಭರವಸೆಯಲ್ಲಿ ಬೆಂಗಳೂರಿಗೆ ತೆರಳುತ್ತಿದ್ದಾರೆ.

ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಅಸಮಾನತೆಯಿಂದಾಗಿ ಬೆಂಗಳೂರಿಗೆ ವಲಸೆ ಹೋಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 

ಸ್ಟ್ರೀಟ್ ಫ್ರಾಂಟಿಯರ್ ಎಂಬ ಸಂಶೋದನಾ ತಂದ ಬೆಂಗಳೂರು ಹಾಗೂ ಇನ್ನಿತರ ಜಿಲ್ಲೆಗಳ ವ್ಯತ್ಯಾಸಗಳ ಬಗ್ಗೆ ಅಧ್ಯಯನ ನಡೆಸಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!