ಕರ್ನಾಟಕದ ಭೂಪಟದಲ್ಲಿ ತನ್ನದೇ ಆದ ಹೆಸರು ಮಾಡಿದ ನಗರ ಧಾರವಾಡ. ಧಾರವಾಡ ಶಿಕ್ಷಣ, ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದೆ.
ನಿವೃತ್ತರ ಸ್ವರ್ಗ ಅಂತಲೂ ಇದಕ್ಕೆ ಕರೆಯಲಾಗುತ್ತದೆ. ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವದು ಪೊಲೀಸ್ ಇಲಾಖೆಗೆ ಒಂದು ರೀತಿ ಸವಾಲು.
ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ, ಧಾರವಾಡ ಜನತೆಯ ನೆಮ್ಮದಿಗೆ ಭಂಗ ತರುವಂತಹ ಘಟನೆಗಳು ನಡೆಯದೆ ಇರುವದು ಸಂತೋಷದ ಸಂಗತಿ.
ಧಾರವಾಡ ಎ ಸಿ ಪಿ ಪ್ರಶಾಂತ ಸಿದ್ದನಗೌಡರ, ಶಹರ ರಾಣೆ ಇನ್ಸಪೆಕ್ಟರ್ ನಾಗೇಶ್ ಕಾಡದೇವರಮಠ, ಉಪನಗರ ಠಾಣೆ ಇನ್ಸಪೆಕ್ಟರ್ ದಯಾನಂದ ಶೇಗುಣಸಿ , ವಿದ್ಯಾಗಿರಿ ಠಾಣೆ ಇನ್ಸಪೆಕ್ಟರ್ ಸಂಗಮೇಶ ದಿಡಗನಾಳ ಎಂಬ ಪೊಲೀಸ್ ಅಧಿಕಾರಿಗಳು 2024 ರಲ್ಲಿ ಧಾರವಾಡ ನಗರವನ್ನು ನೆಮ್ಮದಿಯಾಗಿರುವಂತೆ ನೋಡಿಕೊಂಡಿದ್ದಾರೆ.
