ಶೈಕ್ಷಣಿಕ ನಗರಿ ಎಂದು ಕರೆಸಿಕೊಳ್ಳುವ ಧಾರವಾಡದಲ್ಲಿ ಶಾಪಗ್ರಾಸ್ಥ ರಸ್ತೆಯೊಂದು ಸಾವನ್ನು ಆಹ್ವಾನಿಸುತ್ತಿದೆ.
ಧಾರವಾಡದ ಕೆಸಿಡಿ ಸರ್ಕಲ್ ನಿಂದ ಸಪ್ತಾಪುರ ಭಾವಿ ಮಾರ್ಗವಾಗಿ ಹಳಿಯಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಳ್ಳ ಹಿಡಿದಿದೆ.
ಲೋಕೋಪಯೋಗಿ ಮತ್ತು ಪಾಲಿಕೆ ಈ ರಸ್ತೆ ನಿರ್ಮಾಣಕ್ಕೆ ವರ್ಷಕ್ಕೊಮ್ಮೆ ಖರ್ಚು ಹಾಕುತ್ತಾರೆ. ಆದರೆ ಡಾಂಬರ್ ರಸ್ತೆ ವರ್ಷ ಪೂರ್ಣಗೊಳ್ಳುವದರೊಳೆಗೆ ಕಿತ್ತು ಹೋಗುತ್ತದೆ.
ಪರ ಊರಿನ ಸಾವಿರಾರು ವಿಧ್ಯಾರ್ಥಿಗಳು ಕೆಸಿಡಿ ಸರ್ಕಲ್ ನಿಂದ ಸಪ್ತಾಪುರ ಭಾವಿ ವರೆಗೆ ಹಾಯ್ದು ಹೋಗಬೇಕಾದರೆ, ಮೂಗು ಮುಚ್ಚಿಕೊಂಡು, ವಾಹನ ಸವಾರರು ನೃತ್ಯ ಮಾಡಿಕೊಂಡು ಹೋಗಬೇಕು.
ಪದೇ ಪದೇ ಈ ರಸ್ತೆಯ ಡಾಂಬರ್ ಕಿತ್ತು ಹೋಗುತ್ತಿದ್ದು, ಗುತ್ತಿಗೆದಾರರ ಗುಣಮಟ್ಟಕ್ಕೆ ಈ ರಸ್ತೆ ಸವಾಲೋಡ್ಡಿದೆ.
ಲೋಕೋಪಯೋಗಿ ಇಲಾಖೆ ಮತ್ತು ಪಾಲಿಕೆ ಅಧಿಕಾರಿಗಳಿಗೆ ಮಾನ ಮರ್ಯಾದೆ ಇದ್ದರೆ ಈ ರಸ್ತೆಗೆ ಗುಣಮಟ್ಟದ ಡಾಂಬರ್ ಹಾಕಲಿ ಅನ್ನೋದು ಪ್ರಜ್ಞಾವಂತರ ಮಾತು.
2 thoughts on “ಶೈಕ್ಷಣಿಕ ನಗರಿಯ ಶಾಪಗ್ರಸ್ಥ ರಸ್ತೆ ಇದು. ಗರ್ಭಿಣಿ ಅಂಬುಲೆನ್ಸ್ ನಲ್ಲಿ ಬಂದರೆ, ನಾರ್ಮಲ್ ಡಿಲೆವರೀ ಖಚಿತ, ಬೈಕ್ ಜೋರು ಓಡಿಸಿದ್ರೆ ಸಾವು ಖಚಿತ”
ನಮಸ್ಕಾರ್ ಸರ್
ಸಿಬಿಟಿ ಇಂದ ನೆಹರು ನಗರ ಮತ್ತು ತಪೋವನ್ ಗೆ ಬರುವ ಬಸ್ ಗಳು ಮಕ್ಲುದುಮ್ ಕಲ್ಯಾಣ್ ಮಂಟಪ ದ ಪಕ್ಕ ಹಾದು ಮುಂದೆ ನೆಹರು ನಗರಕ್ಕೆ ಬರುತ್ತವೆ ಇಲ್ಲೀ ರೋಡ್ ತುಂಬಾ ಚಿಕ್ಕ ದು ಇರುವ ಕಾರಣ ಬಹಳ ಆಕ್ಸಿಡೆಂಟ್ ಗಳು ಆಗಿವೆ ಮತ್ತು ಕ್ರಾಸ್ ಗಳು ಇರುವದರಿಂದ ಮನೆಯ ಗೇಟ್ ಮುಂದೆ ಕಟ್ ಮಾಡಿ ಹೋಗಬೇಕು ಕಾರ್ನರ್ ಸೈಟ್ ಇರುವದರಿಂದ ದೊಡ್ಡ ಹೊಸದಾಗಿ ಬಿಟ್ಟ ಬಸ್ ತಿರುಗಿ ಸಲು ತುಂಬಾ ತೊಂದೆರೆ ಆಗುತ್ತೆ ನನ್ನ ಅನಿಸಿಕೆ ಈಗ ಬಿಟ್ಟ ಹೊಸ ಬಸ್ ಗಳ್ನ್ನು ಬಿಡಬಾರದು. ಈಗ ಮಿನಿ ಗ್ರೀನ್ ಕಲರ್ ಗಳನ್ನ ರನ್ ಮಾಡುವದು ಸರಿ. ನನ್ನ ಕಾರ್ನರ್ ಓಪನ್ ಜಗದಲ್ಲಿ ಕಾಲು ಭಾಗ ಟರ್ನ್ ಆಗುತ್ತವೆ. ನನಗೆ ಕಾಂಪೌಂಡ್ ಗೆ ತೊಂದರೆ ಆಗುತ್ತದೆ. ನೀವು ಒಂದುಸಲ ಬೆಳಕು ಚೆಲ್ಲಿ ಅಂತಾ ನನ್ ರಿಕ್ವೆಸ್ಟ್.
ತಮ್ಮ
ಪ್ರಕಾಶ್
ಖಂಡಿತ ಸರ್