ಧಾರವಾಡದ ಕ್ರಿಯಾಶೀಲ ಮಹಿಳಾ ಸಂಘಟನೆಯಾದ ಸುವರ್ಣ ಮಹಿಳೆಯರ ಕನಸಿನ ಧಾರವಾಡ ಆಶ್ರಯದಲ್ಲಿ ಇದೆ ದಿನಾಂಕ 10 ರಂದು ಧಾರವಾಡದಲ್ಲಿ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿದೆ.
ಧಾರವಾಡದ ಕೋರ್ಟ ಸರ್ಕಲ್ ಬಳಿ ಇರುವ ಗಾಂಧಿ ಶಾಂತಿ ಪ್ರತಿಷ್ಟಾನದಲ್ಲಿ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿದ್ದು, ಆಸಕ್ತ ಮಹಿಳೆಯರು ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಹೇಮಾಕ್ಷಿ ಕಿರೆಸೂರ ಇವರು ಅಡುಗೆ ಸ್ಪರ್ಧೆಯ ಆಯೋಜನೆ ಮಾಡಿದ್ದಾರೆ. ಸುವರ್ಣ ಮಹಿಳೆಯರ ಕನಸಿನ ಧಾರವಾಡ ಪ್ರತಿ ವರ್ಷ ಸಂಕ್ರಾಂತಿ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸುತ್ತ ಬಂದಿದೆ.