ಗುಜರಾತ್‌ನಿಂದ ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ಹಿಂದೂ ಮಹಾ ಕುಂಭ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ರೈಲಿನ ಮೇಲೆ ದಾಳಿ ನಡೆದಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಈ ರೈಲು ಗುಜರಾತದ ಸೂರತ್‌ನಿಂದ ಪ್ರಯಾಗ್‌ರಾಜ್‌ಗೆ ಪ್ರಯಾಣಿಸುತ್ತಿತ್ತು. ತಪ್ತಿಗಂಗಾ ಎಕ್ಸ್‌ಪ್ರೆಸ್ ರೈಲು ಮಹಾರಾಷ್ಟ್ರದ ಜಲಗಾಂವ್ ಬಳಿ ಬರುತ್ತಿದ್ದಂತೆ ರೈಲಿನ ಮೇಲೆ ದಾಳಿ ನಡೆಸಲಾಗಿದೆ.
ದುಷ್ಕರ್ಮಿಗಳಿಂದ ನಡೆದ ಕಲ್ಲು ತೂರಾಟದಿಂದಾಗಿ ತಪ್ತಿಗಂಗಾದ ಬಿ6 ಕೋಚ್ ನ್ ಗಾಜಿನ ಕಿಡಕಿಗಳು ಪುಡಿ ಪುಡಿಯಾಗಿವೆ.
ಘಟನೆ ಖಂಡಿಸಿರುವ ಮಹಾರಾಷ್ಟ್ರದ ಬಿಜೆಪಿ ಸರ್ಕಾರ ತಕ್ಷಣ ತನಿಖೆಗೆ ಆದೇಶ ನೀಡಿದೆ.
