ಧಾರವಾಡದಲ್ಲಿರುವ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್) ಯಲ್ಲಿ ಮಾನಸಿಕ ರೋಗಿಗಳ ಸಂಖ್ಯೆ ಜಾಸ್ತಿಯಾಗುತ್ತ ಬರುತ್ತಿದೆ.
ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ರಾಜ್ಯದಿಂದ ಮಾನಸಿಕ ರೋಗಿಗಳು ಧಾರವಾಡದ ಮಾನಸಿಕ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರತಿ ದಿನ 300 ರಿಂದ 350 ಜನ ಮಾನಸಿಕ ರೋಗಕ್ಕೆ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಸರ್ಕಾರ, ಧಾರವಾಡ ಮಾನಸಿಕ ಆಸ್ಪತ್ರೆಗೆ ಸುಸಜ್ಜಿತ ಸೌಲಭ್ಯ ನೀಡಿದ್ದು, ಉತ್ತಮ ಚಿಕಿತ್ಸೆ, ಉತ್ತಮ ವೈಧ್ಯರ ಪಡೆ ಇದಕ್ಕೆ ಕಾರಣ ಎನ್ನಲಾಗಿದೆ.
ಮಾದಕ ವ್ಯಸನ, ಕೌಟುಂಬಿಕ, ಒತ್ತಡದ ಬದುಕು ಸೇರಿದಂತೆ ಅನೇಕ ಕಾರಣಗಳಿಂದ ವ್ಯಕ್ತಿಯ ಮಾನಸಿಕ ಮನೋಬಲ ಕುಸಿಯುತ್ತಿರುವದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾನಸಿಕ ರೋಗಿಗಳು ಚಿಕಿತ್ಸೆಗೆ ನಿತ್ಯ ಬರುತ್ತಿದ್ದಾರೆ.
ಮದ್ಯಪಾನದಿಂದ ದೇಹವನ್ನು ಸದೃಢವಾಗಿಟ್ಟುಕೊಳ್ಳಬಹುದು ಎಂಬ ಹುಚ್ಚು ಕಲ್ಪನೆಯಿಂದ ಅನೇಕ ಯುವಕ ಮತ್ತು ಯುವತಿಯರು ಮದ್ಯಪಾನಕ್ಕೆ ಮಾರು ಹೋಗುತ್ತಿದ್ದು, ಮಾನಸಿಕ ಧೈರ್ಯ ಕಳೆದುಕೊಳ್ಳುತ್ತಿದ್ದಾರೆ.
ಧಾರವಾಡದ ಡಿಮಾನ್ಸ್ ನಲ್ಲಿ ಉತ್ತಮ ವೈದ್ಯರಿದ್ದು, ಎಲ್ಲ ತರದ ಚಿಕಿತ್ಸೆ ಇಲ್ಲಿ ಲಭ್ಯವಿದೆ.
ಧಾರವಾಡದ ಮಾನಸಿಕ ಆಸ್ಪತ್ರೆ 375 ಜನರ ಹಾಸಿಗೆ ಸೌಲಭ್ಯ ಹೊಂದಿದೆ. ಈಗ ಸಧ್ಯ 20 ವೈದ್ಯರು ಕೆಲಸ ಮಾಡುತ್ತಿದ್ದು, ತುರ್ತು ಚಿಕಿತ್ಸಾ ಘಟಕ ತೆರೆಯಲಾಗಿದೆ.
ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯಕ್ಕೂ ಕರ್ನಾಟಕ ಸರ್ಕಾರ ಆಧ್ಯತೆ ನೀಡಿದ್ದು, ಕಳೆದ 5 ವರ್ಷಗಳ ಅವಧಿಯಲ್ಲಿ 47 ಲಕ್ಷ 89 ಸಾವಿರ ಜನಕ್ಕೆ ಮನೋವೈದ್ಯಕೀಯ ಸೇವೆ ನೀಡಲಾಗಿದೆ.