ಮಹಿಳೆಯೊಬ್ಬರು 5 ಲಕ್ಷ ಖರ್ಚು ಮಾಡಿ ತಮ್ಮ ಸಾಕು ನಾಯಿಯ ಹುಟ್ಟುಹಬ್ಬವನ್ನು ಆಚರಿಸಿದ ಘಟನೆ ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿ ನಡೆದಿದೆ.
ಸಪನಾ ಎಂಬ ಮಹಿಳೆ, 40 ಸಾವಿರ ರೂಪಾಯಿಯ ಕೇಕ್ ತಂದು ಸಾಕು ನಾಯಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಜೊತೆಗೆ 300 ಅತಿಥಿಗಳನ್ನು ಆಹ್ವಾನಿಸಿ ಹುಟ್ಟುಹಬ್ಬ ಆಚರಿಸಿ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಿ ಸಂಭ್ರಮಿಸಿದ್ದಾರೆ.
ಈ ಮಹಿಳೆಯ ಶ್ವಾನಪ್ರೀತಿ ನೋಡಿದ ಜನರು ಸಾಮಾಜಿಕ ಜಾಲತಾಣಗಳಲ್ಲಿ ಆಕೆಯನ್ನು ಕೊಂಡಾಡುತ್ತಿದ್ದಾರೆ.