ಕರ್ನಾಟಕದಲ್ಲಿ ಕಾಂಗ್ರೇಸ್ ಸರ್ಕಾರ ಬರಲು ಕಾರಣವಾದ ಗ್ಯಾರೆಂಟಿ ಯೋಜನೆಗಳನ್ನು ಮುಂದುವರೆಸಿರುವ ಕಾಂಗ್ರೇಸ್, ಇದೀಗ ದೆಹಲಿ ಚುನಾವಣೆಯಲ್ಲಿಯೂ ಪುಕ್ಕಟೆ ಭಾಗ್ಯ ಘೋಷಿಸಿದೆ.
ದೆಹಲಿ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಆಮ್ ಆದ್ಮಿ ಹಾಗೂ ಕಾಂಗ್ರೇಸ್ ಪಕ್ಷ ಪೈಪೋಟಿಗೆ ಬಿದ್ದವರಂತೆ ಪುಕ್ಕಟೆ ಯೋಜನೆಗಳನ್ನು ಘೋಷಿಸುತ್ತಿದೆ.
ದೆಹಲಿ ಗದ್ದುಗೆ ಏರಲು ಕಾಂಗ್ರೇಸ್ ಪುಕ್ಕಟೆ ಭಾಗ್ಯ ಘೋಷಣೆ ಮಾಡಿದ್ದು, ಪ್ರತಿ ತಿಂಗಳು 6 ಕೆ ಜಿ ತೊಗರಿಬೇಳೆ, 5 ಕೆಜಿ ಅಕ್ಕಿ, 2 ಕೆಜಿ ಸಕ್ಕರೆ, 250 ಗ್ರಾಮ ಚಹಾಪುಡಿ, ಒಂದು ಪ್ಯಾಕೆಟ್ ಎಣ್ಣೆ ಕೊಡಲು ನಿರ್ಧರಿಸಿದೆ. 500 ರೂಪಾಯಿಗೆ ಒಂದು ಸಿಲೆಂಡರ್ ಕೊಡುವದಾಗಿ ಹೇಳಿದೆ.