ಶ್ರೀ ಆ್ಯಂಡ್ ಶ್ರೀ ಗೋಲ್ಡ್ ಪ್ಯಾಲೇಸ್ ಇಲ್ಲಿನ ಗೋಕುಲರಸ್ತೆಯ ಸಿಲ್ವರ್ ಟೌನ್ ‘ನಲ್ಲಿ ತೆರೆದು ಅತಿ ಕಡಿಮೆ ಮೇಕಿಂಗ್ ಜಾರ್ಜ್ ನೊಂದಿಗೆ ಚಿನ್ನಾಭರಣ ನೀಡುತ್ತಿದೆ ಎಂದು ಗೋಲ್ಡ್ ಪ್ಯಾಲೇಸ್ ವ್ಯವಸ್ಥಾಪಕ ಹಾಗೂ ಸಂಸ್ಥಾಪಕರಾದ ಶ್ರೀಧರ ದಾವಸ್ಕರ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2005 ರಿಂದ ರಾಜ್ಯದ ಜನರಿಗೆ ಅತಿ ಕಡಿಮೆ ಮೇಕಿಂಗ್ ಚಾರ್ಜ್ ಜೊತೆಗೆ ಚಿನ್ನಾಭರಣ ನೀಡುತ್ತಿರುವ ಶ್ರೀ ಆ್ಯಂಡ್ ಶ್ರೀ ಗೋಲ್ಡ್ ಪ್ಯಾಲೇಸ್ 40 ಕ್ಕೂ ಅಧಿಕ ರಾಜ್ಯ ಮತ್ತು ಹೊರ ದೇಶಗಳಿಂದ ಚಿನ್ನಾಭರಣ ತಯಾರಿಸುವ ಕಾರ್ಖಾನೆಯಿಂದ ನೇರವಾಗಿ ವಿಭಿನ್ನ ವಿನ್ಯಾಸವುಳ್ಳ ಚಿನ್ನಾಭರಣವನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಿದೆ ಎಂದರು.
ಮಳಿಗೆಯು ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿದ್ದು, 916 ಹಾಲ್ಮಾರ್ಕ್ ಹೊಂದಿರುವ ಬ್ರಾಂಡೆಡ್ ಜ್ಯುವೆಲರಿ, ಫಿನಿಶಿಂಗ್ ಆಭರಣಗಳನ್ನು ತಯಾರಿಸಿ ನೀಡುತ್ತಿದೆ. ಗ್ರಾಹಕರು ತಮಗೆ ಇಷ್ಟದಂತೆ ನೀಡುವ ಆರ್ಡರ್ ನಂತೆ ಆಭರಣವನ್ನು ಅತಿ ಕಡಿಮೆ ಮೇಕಿಂಗ್ ದರದಲ್ಲಿ ನೇರವಾಗಿ ಮಾರಾಟ ಮಾಡುತ್ತಿರುವ ಹುಬ್ಬಳ್ಳಿಯ ಏಕೈಕ ಚಿನ್ನಾಭರಣ ಮಳಿಗೆಯಾಗಿದೆ ಎಂದು ತಿಳಿಸಿದರು.
ನಮ್ಮ ಮಳಿಗೆಯ ಉದ್ದೇಶ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಚಿನ್ನಾಭರಣ ಒದಗಿಸುವ ಗುರಿ ಹೊಂದಿದ್ದೇವೆ. ಜನರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.