ಮಾರಣಾಂತಿಕ ರೋಗಿಗಳಿಗೆ ಗೌರವದಿಂದ ಸಾಯುವ ಹಕ್ಕು ನೀಡಿ ಸರ್ಕಾರ ಹೊಸ ಕಾನೂನನ್ನು ಪರಿಚಯಿಸಿದೆ.
ಈ ಮೂಲಕ ಕರ್ನಾಟಕ ದೇಶದಲ್ಲಿ ಮೊದಲ ಬಾರಿಗೆ ಈ ಕಾನೂನನ್ನು ಜಾರಿಗೆ ತಂದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸುಪ್ರೀಂ ಕೋರ್ಟ್ ತೀರ್ಪನ್ನು ಅನುಸರಿಸಿ, ಆಸ್ಪತ್ರೆಗಳು ಮತ್ತು ಜಿಲ್ಲೆಗಳಲ್ಲಿ ಚೇತರಿಸಿಕೊಳ್ಳುವ ನಿರೀಕ್ಷೆಯಿಲ್ಲದ ಅಥವಾ ಜೀವಾವಧಿ ಚಿಕಿತ್ಸೆಯಿಂದ ಇನ್ನು ಮುಂದೆ ಪ್ರಯೋಜನ ಇಲ್ಲದ , ಅಂತಿಮ ಹಂತದ ರೋಗಿಗಳಿಗೆ “ಘನತೆಯಿಂದ ಸಾಯುವ ಹಕ್ಕನ್ನು” ಪ್ರಮಾಣೀಕರಿಸಲು ಮಂಡಳಿಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದೆ.
ರಾಜ್ಯ ಸರ್ಕಾರ ಈ ಕಾನೂನಿನ ಅನ್ವಯ ಕೆಲವು ಸೂಚನೆಗಳನ್ನು ನೀಡಿದ್ದು, ಅದರ ಪ್ರಕಾರವೇ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ.
ಅನಾರೋಗ್ಯ ಪೀಡಿತರು ಗೌರವದಿಂದ ಸಾಯುವ ವ್ಯಕ್ತಿಯ ಹಕ್ಕನ್ನು ಪಡೆದುಕೊಳ್ಳುವ ತಮ್ಮ ಅಂಗಾಂಗಗಳನ್ನು ದಾನ ಮಾಡುವ ಬಗ್ಗೆ ಕುಟುಂಬಸ್ಥರು ಖಾತ್ರಿಪಡಿಸಬೇಕಾಗಿದೆ.