ಧಾರವಾಡ ಪೊಲೀಸರು, ದರೋಡೆ ನಡೆದ 24 ಘಂಟೆಗಳ ಅವಧಿಯಲ್ಲಿ ಮೂವರು ಅಂತರ ಜಿಲ್ಲಾ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿನ್ನೇ ಧಾರವಾಡದ ಮಾಳಮಡ್ಡಿಯ ಆನಂದ ಕಬ್ಬುರ ಎಂಬುವವರ ಮನೆಗೆ ನುಗ್ಗಿದ್ದ ದರೋಡೆಕೋರರು, ಬಂಗಾರದ ಆಭರಣ, ನಗದು ಹಣ ದೋಚಿ ಪರಾರಿಯಾಗಿದ್ದರು.
ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದ ವಿದ್ಯಾಗಿರಿ ಠಾಣೆಯ ಪೊಲೀಸರು, ಇನ್ಸಪೆಕ್ಟರ್ ಸಂಗಮೇಶ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮೂವರು ದರೋಡೆಕೋರರನ್ನು ಬಂಧಿಸಿದ್ದಾರೆ.
ಅಶೋಕ ಹೊಸಮನಿ, ಶಿವಕುಮಾರ ಕೋಕಾಟಿ, ಶಿವಾನಂದ ಕರಡಿಗುಡ್ಡ ಎಂಬ ದರೋಡೆಕೋರರನ್ನು ಬಂಧಿಸಲಾಗಿದ್ದು, ಇವರೆಲ್ಲ ಧಾರವಾಡದ ಹೊಸ ಯಲ್ಲಾಪುರ ನಿವಾಸಿಗಳಾಗಿದ್ದಾರೆ.
ದರೋಡೆ ನಡೆದ 24 ಘಂಟೆಗಳಲ್ಲಿ ಆರೋಪಿಗಳನ್ನು ಸೆರೆ ಹಿಡಿದ ಪೊಲೀಸರಿಗೆ ಆಯುಕ್ತ ಶಶಿಕುಮಾರ ಬಹುಮಾನ ಘೋಷಿಸಿದ್ದಾರೆ.
![Karnataka Files](https://secure.gravatar.com/avatar/3c8a792dfb280b36a94603273157ff83?s=96&r=g&d=https://karnatakafiles.com/wp-content/plugins/userswp/assets/images/no_profile.png)