ಖ್ಯಾತ ಸಂಗೀತಗಾರ, ಲೇಖಕ ದನಿಪದದಾಸ, ಡಾ.ಹಂಸಲೇಖ ಈ ಸಲದ ಮೈಸೂರು ದಸರಾ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು ಅಕ್ಟೋಬರ್ 15 ರಂದು ಹಂಸಲೇಖ ಅವರು ಈ ಬಾರಿಯ ದಸರಾವನ್ನು ಉದ್ಘಾಟಿಸಲಿದ್ದಾರೆ ಎಂದರು. ಈ ಹಿಂದೆ ಗಿರೀಶ್ ಕಾರಂತ್, ಚೆನ್ನವೀರ ಕಣವಿ, ಬರಗೂರು ರಾಮಚಂದ್ರಪ್ಪ ಅವರಂತ ಸಾಹಿತಿಗಳಿಗೂ ದಸರಾ ಉದ್ಘಾಟನೆ ಭಾಗ್ಯ ಸಿಕ್ಕಿತ್ತು.
