ಬಾಗಲಕೋಟ ಲೋಕಸಭಾ ಕ್ಷೇತ್ರದ ನರಗುಂದದಲ್ಲಿ ನಡೆದ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅಚ್ಚರಿ ಘಟನೆ ನಡೆದಿದೆ.
ಕಳೆದ 30 ವರ್ಷಗಳಿಂದ ಕಟ್ಟಾ RSS ಕಾರ್ಯಕರ್ತರಾಗಿದ್ದ ರೋಣ ತಾಲೂಕಿನ ಮೆಣಸಗಿ ಗ್ರಾಮದ ನಿಂಗಬಸಪ್ಪ ಬಾಣದ ಗಣ ವೇಷ ಹಾಕಿಕೊಂಡೆ ಕಾಂಗ್ರೇಸ್ ಪಕ್ಷ ಸೇರ್ಪಡೆಯಾಗಿದ್ದಾರೆ.
ಗಣ ವೇಷ ಧಾರಿ ನಿಂಗಬಸಪ್ಪನಿಗೆ ಕಾಂಗ್ರೆಸ್ ಶಾಲು ಹೊದಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಕಪ್ಪು ಟೋಪಿ ತೆಗೆದು ಖಾದಿ ಗಾಂಧಿ ಟೋಪಿ ಹಾಕಿ ಪಕ್ಷದ ನಾಯಕರು ಅವರಿಗೆ ಸ್ವಾಗತ ಕೋರಿದರು. ಸಚಿವ ಶಿವಾನಂದ ಪಾಟೀಲ, ಮಾಜಿ ಸಚಿವ ಬಿಆರ್ ಯಾವಗಲ್, ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಸಮ್ಮುಖದಲ್ಲಿ ಬಾಣದ ಪಕ್ಷ ಸೇರ್ಪಡೆಯಾಗಿದ್ದಾರೆ.