ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪ್ರವೇಶದಿಂದಾಗಿ ಧಾರವಾಡ ಲೋಕಸಭಾ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ಶ್ರೀಗಳು ಹುಬ್ಬಳ್ಳಿಗೆ ಕಾಲಿಡುವ ಮುನ್ನವೇ ಕಾಂಗ್ರೇಸ್ ಅಂಗಳದಲ್ಲಿ ಬೆಳವಣಿಗೆಗಳು ನಡೆದಿವೆ.
ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆ ವಿಚಾರ ಕಾಂಗ್ರೇಸ್ ಹೈಕಮಾಂಡ ಮಟ್ಟಕ್ಕೆ ಹೋಗಿದೆ. ಶ್ರೀಗಳಿಗೆ ಟಿಕೇಟ್ ಕೊಡಬೇಕೋ ಅಥವಾ ಬೆಂಬಲ ಕೊಡಬೇಕೋ ಅನ್ನೋದರ ಬಗ್ಗೆ ಎರಡು ದಿನಗಳಲ್ಲಿ ನಿರ್ಧಾರ ಮಾಡುವದಾಗಿ ರಾಜ್ಯ ಕಾಂಗ್ರೇಸ್ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಹೇಳಿದ್ದು, ಚರ್ಚೆಗೆ ಎಡೆಮಾಡಿದೆ.
ಜೋಶಿ ಬದಲಾವಣೆ ಮಾಡಿ, ಇಲ್ಲದಿದ್ದರೆ ಲಿಂಗಾಯತರಿಗೆ ಉಳಿಗಾಲವಿಲ್ಲ
ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ, ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಕಾರ್ಯಾಧ್ಯಕ್ಷ, ಶಾಸಕ ವಿನಯ ಕುಲಕರ್ಣಿ ಇಂದು ಭಾವುಕ ಮಾತುಗಳನ್ನಾಡಿದ್ದಾರೆ. ಪ್ರಲ್ಲಾದ ಜೋಶಿಯವರ ದಬ್ಬಾಳಿಕೆ, ಸೇಡಿನ ರಾಜಕಾರಣದ ಬಗ್ಗೆ ಮಾತನಾಡಿರುವ ವಿನಯ ಕುಲಕರ್ಣಿ, ಈ ಸಲ ಜೋಶಿ ಬದಲಾವಣೆ ಮಾಡಿರಿ, ಇಲ್ಲದಿದ್ದರೆ ಧಾರವಾಡ ಜಿಲ್ಲೆಯ ಲಿಂಗಾಯತರಿಗೆ ಉಳಿಗಾಲವಿಲ್ಲ ಎಂದು ಭಾವುಕರಾಗಿ ಹೇಳಿದ್ದಾರೆ. ಧಾರವಾಡ ಜಿಲ್ಲೆಯ ಬಹುತೇಕ ಎಲ್ಲ ಲಿಂಗಾಯತ ಮುಖಂಡರನ್ನು ಜೋಶಿ ಮುಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.