ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಅಖಾಡಾ ಸಜ್ಜಾಗಿದೆ. ದಿಂಗಾಲೇಶ್ವರ ಶ್ರೀಗಳು ಸ್ಪರ್ಧೆ ಮಾಡುವದಾಗಿ ಹೇಳಿದ ಬಳಿಕ ಲೆಕ್ಕಾಚಾರ ಶುರುವಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಖಾವಿ ವರ್ಸಸ್ ಖಾದಿ ಸ್ಪರ್ಧೆ ರಂಗು ತಂದಿದೆ.
ಸ್ಪರ್ಧೆಗೆ ನಾನ್ ರೆಡಿ ಎಂದು ಬೆಂಗಳೂರಿನಲ್ಲಿ ಘೋಷಣೆ ಮಾಡಿದ ಬಳಿಕ ಮೊದಲ ಬಾರಿಗೆ ಹುಬ್ಬಳ್ಳಿಗೆ ಬರಲಿರುವ ಶ್ರೀಗಳನ್ನು ಅದ್ದೂರಿಯಾಗಿ ಸ್ವಾಗತಿಸಲು ಭಕ್ತರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ.
ನಾಳೆ ಮಧ್ಯಾಹ್ನ 4 ಘಂಟೆಗೆ ನೆಹರು ಮೈದಾನಕ್ಕೆ ಬರುವ ದಿಂಗಾಲೇಶ್ವರ ಶ್ರೀಗಳನ್ನು ಬರಮಾಡಿಕೊಳ್ಳುವ ಭಕ್ತರು, ಅಲ್ಲಿಂದ ಮೂರು ಸಾವಿರ ಮಠದ ವರೆಗೆ ಮೆರವಣಿಗೆ ಮಾಡಲಿದ್ದಾರೆ. ನವಲಗುಂದ, ಕುಂದಗೋಳ, ಕಲಘಟಗಿ, ಧಾರವಾಡ ಗ್ರಾಮೀಣ, ಧಾರವಾಡ ಶಹರದಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಭಕ್ತರನ್ನು ಸೇರಿಸಲು ಯೋಚಿಸಲಾಗಿದ್ದು, ಅದ್ದೂರಿ ಮೆರವಣಿಗೆ ನಡೆಯಲಿದೆ.