ವಿಶ್ವ ಪ್ರಸಿದ್ಧ ಇಂಜಿನಿಯರ್ ಸರ್, ಎಂ ವಿಶ್ವೇಶ್ವರಯ್ಯನವರ ಪ್ರತಿಮೆ ವಿರುಪಗೊಂಡ ಘಟನೆ ಧಾರವಾಡದ ಕೆಲಗೇರಿಯಲ್ಲಿ ನಡೆದಿದೆ.
ಧಾರವಾಡದ ಐತಿಹಾಸಿಕ ಕೆಲಗೇರಿ ಕೆರೆಯ ದಡದಲ್ಲಿ ಇರುವ ಸರ್ ಎಂ ವಿಶ್ವೇಶ್ವರಯ್ಯನವರ ಪ್ರತಿಮೆ ಹಾಗೂ ಸುತ್ತಲಿನ ಕಾಮಗಾರಿಯನ್ನು ನಡೆಸಿದ್ದ ನಿರ್ಮಿತಿ ಕೇಂದ್ರ ಎಡವಟ್ಟು ಮಾಡಿಕೊಂಡಿದೆ.
ಕಳಪೆ ಕಾಮಗಾರಿಗೆ ಹೆಸರುವಾಸಿಯಾದ ನಿರ್ಮಿತಿ ಕೇಂದ್ರಕ್ಕೆ ಸರ್ಜರಿ ಮಾಡಬೇಕಿದ್ದು, ಜಿಲ್ಲಾಧಿಕಾರಿಗಳು ತುರ್ತು ಗಮನ ಹರಿಸಬೇಕಿದೆ.
ಅಂದಾಜು ಸುಮಾರು ಒಂದೂವರೆ ಕೋಟಿಯ ಕಾಮಗಾರಿ ನಡೆಸಿರುವ ನಿರ್ಮಿತಿ ಕೇಂದ್ರದ ಅಧಿಕಾರಿಗಳ ಕಣ್ಣಿಗೆ ವಿಶ್ವೇಶ್ವರಯ್ಯನವರ ಪ್ರತಿಮೆ ಕಣ್ಣಿಗೆ ಬೀಳದಿರುವದು ಶೋಚನಿಯ ಸಂಗತಿ.