ಕಲ್ಯಾಣ ಕರ್ನಾಟಕದ ಗಮನ ಸೆಳೆದಿದ್ದ, ಸಂಡೂರು ವಿಧಾನಸಭೆ ಉಪಚುನಾವಣೆಯಲ್ಲಿ ಸೋಲಿನ ಬಳಿಕ ಮತ ಎಣಿಕೆ ಕೇಂದ್ರದಿಂದ ಹೊರ ನಡೆಯುತ್ತಿದ್ದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ, ತೊಡೆ ತಟ್ಟಿದ್ದಾರೆ.
ಏಣಿಕೆ ಕೇಂದ್ರದಿಂದ ಬಂಗಾರು ಹೊರಗೆ ಬರುತ್ತಿದ್ದಂತೆ, ಅವರನ್ನು ನೋಡಿ, ಘೋಷಣೆ ಹಾಕಿದ ಕಾಂಗ್ರೇಸ್ ಕಾರ್ಯಕರ್ತರನ್ನು ಕಂಡು ಬಂಗಾರು ತೊಡೆ ತಟ್ಟಿದ ಘಟನೆ ನಡೆಯಿತು.
ತಕ್ಷಣ ಮಧ್ಯಪ್ರವೇಶ ಮಾಡಿದ ಪೊಲೀಸರು, ಬಂಗಾರು ಹನುಮಂತರನ್ನು ಕಾರು ಹತ್ತಿಸಿ ಕಳಿಸಿದರು.