ಚೆನ್ನೈನ ಅಣ್ಣಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಡಿಎಂಕೆ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ತಮಗೆ ತಾವೇ ಚಾಟಿ ಏಟು ತಿಂದಿದ್ದನ್ನು ಕರ್ನಾಟಕದ ವಕೀಲ್ ಸಾಬ್ ಎಂದೇ ಹೆಸರಾದ ಜಗದೀಶ್ ವಕೀಲರು ಅಣ್ಣಾಮಲೈಯನ್ನು ಅಣುಕಿಸಿದ್ದಾರೆ.
ವಕೀಲ್ ಸಾಬ್ ಜಗದೀಶ್ ಅವರು, ಅಣ್ಣಾಮಲೈಯಂತೆ, ಅವೈಜ್ಞಾನಿಕವಾಗಿ ಜೆಎಎಷ್ಟಿ ವಿಧಿಸಿದ್ದನ್ನು ಖಂಡಿಸಿ ತಮಗೆ ತಾವೇ ಬಟ್ಟೆಯ ಚಾಟಿ ಏಟು ವಿಧಿಸಿಕೊಂಡಿದ್ದಾರೆ. ಇವರಿಬ್ಬರ ಚಾಟಿ ಏಟಿನ ವಿಡಿಯೋ ವೈರಲ್ ಆಗಿದೆ.