ಬಿಜೆಪಿ ಆಂತರಿಕ ಕದನ ಮುಗಿಯುವಂತೆ ಕಾಣುತ್ತಿಲ್ಲ. ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಟೀಮ್ ಪೈಪೋಟಿಗೆ ಬಿದ್ದವರಂತೆ ನಾಲಿಗೆ ಹರಿಬಿಡುತ್ತಿದ್ದಾರೆ.
ದಾವಣಗೆರೆಯಲ್ಲಿ ಇಂದು ಮಾತನಾಡಿದ ಮಾಜಿ ಶಾಸಕ ಎಮ್ ಪಿ ರೇಣುಕಾಚಾರ್ಯ, ಯತ್ನಾಳರ ಮೇಲೆ ಮುಗಿಬಿದ್ದರು.
ಬಸನಗೌಡ ಪಾಟೀಲ ಯತ್ನಾಳರು, ಅಯೋಗ್ಯ ಎಂಬ ಶಬ್ದ ಬಳಕೆ ಮಾಡಿದ್ದರಿಂದ ರೊಚ್ಚಿಗೆದ್ದ ರೇಣುಕಾಚಾರ್ಯ ನಾಲಿಗೆ ಹರಿಬಿಟ್ಟಿದ್ದಾರೆ.
ಬಸನಗೌಡ ಪಾಟೀಲ ಯತ್ನಾಳರ ಮೇಲೆ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಯತ್ನಾಳಗೆ 420 ನೀನು, ನಮಕ್ ಹರಾಮ್ ನೀನು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿನೇ ದಿನೇ ಬಿಜೆಪಿ ನಾಯಕರ ವಾಕ್ಸಮರ ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತಿದ್ದು, ಅಶ್ಲೀಲ, ಅನಾಗರಿಕ, ಅಸಂವಿದಾನಿಕ ಪದಗಳು ಬಳಕೆಯಾಗುತ್ತಿವೆ.
