ಧಾರವಾಡ ಇವತ್ತು ಕೈ ಕಲಿಗಳಿಂದ ತುಂಬಿತ್ತು. ಎಲ್ಲಿ ನೋಡಿದ್ರಲ್ಲಿ ಕಾಂಗ್ರೇಸ್ ಭಾವುಟಗಳು ರಾರಾಜಿಸುತ್ತಿದ್ವು. ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿ ಸಾವಿರಾರು ಕಾರ್ಯಕರ್ತರು ಹಾಗೂ ಮುಖಂಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ರು.
ಶಿವಾಜಿ ಸರ್ಕಲನಿಂದ ಆರಂಭವಾದ ಮೆರವಣಿಗೆ, ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿತು. ಮಾರ್ಗದುದ್ದಕ್ಕು ಕಾರ್ಯಕರ್ತರ ಜಯಘೋಷಗಳು ಮುಗಿಲು ಮುಟ್ಟಿದ್ದವು. 8 ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 30 ಸಾವಿರಕ್ಕೂ ಹೆಚ್ಚು ಜನ ನಾಮಪತ್ರ ಸಮಾರಂಭಕ್ಕೆ ಸಾಕ್ಷಿಯಾದರು.
ಬೆಳಿಗ್ಗೆ 10 -30 ರ ಸುಮಾರಿಗೆ ಮುಹೂರ್ತದ ವೇಳೆ ನಾಮಪತ್ರ ಸಲ್ಲಿಸಿದ ವಿನೋದ ಅಸೂಟಿ, ನಂತರ ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಸಿದ್ರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಶಾಸಕರಾದ ಎನ್ ಎಚ್ ಕೋನರೆಡ್ಡಿ, ಪ್ರಸಾದ ಅಬ್ಬಯ್ಯ, ಮಾಜಿ ಶಾಸಕರಾದ ಎ ಎಮ್ ಹಿಂಡಸಗೇರಿ, ಅಜಂ ಪೀರ ಖಾದ್ರಿ, ಎಮ್ ಎಸ್ ಅಕ್ಕಿ, ಕುಸುಮಾ ಶಿವಳ್ಳಿ, ಸೇರಿದಂತೆ ಅನೇಕ ಮುಖಂಡರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿದ್ರು.
ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಇದು ಜಸ್ಟ್ ಟ್ರೇಲರ್, ಪಿಚ್ಚರ ಅಭಿ ಬಾಕಿ ಹೈ ಎಂದು ಮಾತನಾಡಿಕೊಂಡರು.