ಧಾರವಾಡ ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಒಂದೆಡೆ ದಿಂಗಾಲೇಶ್ವರ ಶ್ರೀಗಳು ಮತ್ತೊಂದೆಡೆ ಕಾಂಗ್ರೇಸ್ ನಾಯಕರು ಜೋಶಿಯವರ ಮೇಲೆ ಮುಗಿ ಬಿದ್ದಿರುವದು, ಚುನಾವಣಾ ಕಣ, ರಣರಂಗದ ಸ್ವರೂಪ ಪಡೆದಿದೆ.
ಕೇಂದ್ರ ಸಚಿವರಾಗಿರುವ ಜೋಶಿ, ಲಿಂಗಾಯತ ನಾಯಕರನ್ನು ತುಳಿಯುತ್ತ ಬಂದಿದ್ದಾರೆ ಎಂದು ನೇರವಾಗಿಯೇ ಆರೋಪಿಸಿರುವ ದಿಂಗಾಲೇಶ್ವರ ಶ್ರೀಗಳು, ಕ್ಷೇತ್ರದಲ್ಲಿ ಸದ್ದು ಮಾಡಿದ್ದಾರೆ.
ಮತ್ತೊಂದೆಡೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಪ್ರಧಾನಿ ನರೇಂದ್ರ ಮೋದಿ, ಹಾಗೂ ಸಂಸದ ಜೋಶಿಯವರಿಗೆ ಗಂಭೀರ ಪ್ರಶ್ನೆಗಳನ್ನು ಕೇಳುವ ಮೂಲಕ ಕಟ್ಟಿ ಹಾಕುವ ಪ್ರಯತ್ನ ಮಾಡುತ್ತಿರುವದು ದೊಡ್ಡ ಸುದ್ದಿ ಮಾಡಿದೆ.
” ಜೋಶಿ ಹಠಾವೋ, ಧಾರವಾಡ ಬಚಾವೋ ” ಘೋಷಣೆ. ಏನಿದು ಹೊಸ ಗೇಮ್ ಪ್ಲಾನ್
ಕೇಂದ್ರ ಸಚಿವ ಪ್ರಲ್ಲಾದ ಜೋಶಿ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಿರುವ ಕಾಂಗ್ರೇಸ್ ನಾಯಕರು, ಜೋಶಿ ಹಠಾವೋ, ಧಾರವಾಡ ಬಚಾವೋ ಎಂಬ ಘೋಷಣೆ ಮೊಳಗಿಸಿದ್ದಾರೆ. ಜೋಶಿ ಹಠಾವೋ ಧಾರವಾಡ ಬಚಾವೋ ಎಂಬ ಘೋಷಣೆ ನಿನ್ನೇ ಕಾಂಗ್ರೇಸ್ ಅಭ್ಯರ್ಥಿಯ ನಾಮಪತ್ರದ ಮೆರವಣಿಗೆಯಲ್ಲಿ ಜೋರಾಗಿ ಕೇಳಿ ಬಂದಿದೆ.
ಈ ಬಾರಿ, ಜೋಶಿಯವರ ಸೋಲು ಶತಸಿದ್ದ ಎನ್ನುತ್ತಿರುವ ಕಾಂಗ್ರೇಸ್ ನಾಯಕರು, ನೇರವಾಗಿ ಜೋಶಿಯವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿಗಳ ಅಕ್ಕ ಪಕ್ಕದಲ್ಲಿದ್ದರು, ಮಹಾದಾಯಿ ಯೋಜನೆ ಅನುಷ್ಟಾನ ಮಾಡದಿರುವದು ಜೋಶಿ ಹಠಾವೋ, ಧಾರವಾಡ ಬಚಾವೋ ಎಂಬ ಘೋಷಣೆ ಕೂಗಲು ಕಾರಣವಾಗಿದೆ ಎನ್ನಲಾಗಿದೆ.