ಯೂ ಟ್ಯೂಬರ್ ಒಬ್ಬನ ಮೇಲೆ, ಮದುವೆ ಆಗ್ತೀನಿ ಅಂತ ನಂಬಿಸಿ ಯುವತಿಗೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ.
ಕೊಪ್ಪಳದ ಯೂಟ್ಯೂಬ್ ಸ್ಟಾರ್ ರವಿರಾಜ್, ಮೇಲೆ ಆರೋಪ ಕೇಳಿ ಬಂದಿದೆ. ಸಂತ್ರಸ್ತ ಯುವತಿಯು ಕೊಪ್ಪಳದ ಕಾರಟಗಿ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಸಂಬಂಧ ದೂರು ದಾಖಲು ಮಾಡಿದ್ದಾಳೆ.
ಯೂಟ್ಯೂಬ್ ಸ್ಟಾರ್ ರವಿರಾಜ ಮೇಲೆ ಇದೀಗ ಲವ್, ಸೆಕ್ಸ್ ದೋಖಾ ಕೇಸ್ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಯೂಟ್ಯೂಬ್ ಸ್ಟಾರ್ ರವಿರಾಜ್ ಅವರು ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಶಾರ್ಟ್ ಫಿಲ್ಮ್ ಮಾಡುತ್ತಿದ್ದರು. ಆದ್ರೀಗ ರವಿರಾಜ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು ಮಾಡಲಾಗಿದೆ. ಪ್ರೀತಿ ಅಂತ ನಂಬಿಸಿ ಕೈ ಕೊಟ್ಟ ಹಿನ್ನೆಲೆಯಲ್ಲಿ ಯುವತಿ ಪಾಲಕರೊಂದಿಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
