ಭಾರತದಲ್ಲಿರುವ ಮುಸ್ಲಿಮರು ಹಿಂದೂಗಳು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು ಹಿಂದು ಧರ್ಮ ಸತ್ಯ ಸನಾತನವಾದದ್ದು, ಆರ್ಯರು ಸಹ ಹಿಂದು ಧರ್ಮದ ಭಾಗವಾಗಿದ್ದರು ಎಂದಿರುವ ಅವರು, ಲಿಂಗಾಯತರನ್ನು ಉದ್ದಾರ ಮಾಡಲು ಬ್ರಾಹ್ಮಣರಾಗಿದ್ದ ಬಸವಣ್ಣ ಬರಬೇಕಾಯಿತು ಎಂದಿದ್ದಾರೆ.
ಹಾಗಾಗಿ ಬ್ರಾಹ್ಮಣರಿಗೆ ನಾವು ಕೃತಜ್ಞರಾಗಿರಬೇಕು ಎಂದು ವಚನಾನಂದ ಸ್ವಾಮೀಜಿ ಹೇಳಿದರು. ಧರ್ಮ ಆಚರಣೆ ಮನೆಯಲ್ಲಿರಬೇಕು ಎಂದ ಸ್ವಾಮೀಜಿ, ದೇಶ ಸಮುದಾಯ ಅಂತ ಬಂದಾಗ ನಾವೆಲ್ಲಾ ಹಿಂದುಗಳೆ ಎಂದರು.
ಇನ್ನು ಶ್ರೀಲಂಕಾ ಹಾಗೂ ಅಪಘಾನಿಸ್ಥಾನದವರು ಹಿಂದುಗಳು ಎಂದು ವಚನಾನಾನಂದ ಶ್ರೀಗಳು ಹೇಳಿದ್ದಾರೆ.