ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆಗೆ ಶಾಪವಾಗಿದ್ದ ಟೋಲ್ ಇದೀಗ ಬಂದಾಗಿದೆ. ಸೆಪ್ಟೆಂಬರ್ 7 ರಿಂದ ತನ್ನ ಸಿಬ್ಬಂದಿಯನ್ನು ಹಿಂಪಡೆಯಲು ನಂದಿ ಹೈವೇ ಡೆವಲಪರ್ಸ್ ಲಿಮಿಟೆಡ್ ನಿರ್ಧರಿಸಿ ಪ್ರಕಟಣೆ ಹೊರಡಿಸಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಾಲ್ಕು ಪಥದ ರಸ್ತೆಯನ್ನು ಷಟ್ಪಥ ರಸ್ತೆಯನ್ನಾಗಿ ಮಾಡುತ್ತಿದೆ. ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರ ಪ್ರಯತ್ನ ಕೈಗೂಡಿದ್ದು, ಸೆಪ್ಟೆಂಬರ್ 7 ರಿಂದ ಟೋಲ್ ಸಂಗ್ರಹ ನಿಲ್ಲಿಸಲು ನಂದಿ ಕಂಪನಿ ನಿರ್ಧಾರ ಪ್ರಕಟ ಮಾಡಿದೆ.