ಧಾರವಾಡಕ್ಕೆ ಪ್ರತ್ತೈಕ ಪಾಲಿಕೆ ರಚನೆಯಾಗಬೇಕು ಎಂಬ ಕೂಗು ಕಡೆಗೂ ಈಡೇರುವ ಕಾಲ ಬಂದಿದೆ. ಈ ನಿಟ್ಟಿನಲ್ಲಿ ನಿನ್ನೇ ಬೆಂಗಳೂರಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ, ಸಚಿವ ಭೈರತಿ ಸುರೇಶರನ್ನು ಭೇಟಿ ಮಾಡಿ, ಪ್ರತ್ತೈಕ ಪಾಲಿಕೆಯ ಬಗ್ಗೆ ಚರ್ಚಿಸಿದ್ದು, ಕಡತ ಮಂಡನೆಗೆ ಸಚಿವರು ಸಹಿ ಹಾಕಿದ್ದಾರೆ.
ಪ್ರತ್ತೈಕ ಪಾಲಿಕೆ ರಚನೆಯಾಗಬೇಕು ಎಂದು ನಡೆದ ದಶಕಗಳ ಹೋರಾಟಕ್ಕೆ ಕಡೆಗೂ ಜಯಸಿಕ್ಕಂತಾಗಿದ್ದು,
ಧಾರವಾಡ ಪ್ರತ್ತೈಕ ಪಾಲಿಕೆ ಘೋಷಣೆಗೆ ಒಂದೇ ಮೆಟ್ಟಲು ಬಾಕಿ ಇದೆ. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಪ್ರತ್ತೈಕ ಪಾಲಿಕೆಯ ಕುರಿತು ಸರ್ಕಾರ ಮಹತ್ವದ ತೀರ್ಮಾನ ಪ್ರಕಟ ಮಾಡುವ ಸಾಧ್ಯತೆ ಇದೆ.