ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿದೆ. ನಕ್ಸಲ್ ಚಟುವಟಿಕೆಯಲ್ಲಿ ಕಳೆದ ೩ ದಶಕಗಳಿಂದ ತೊಡಗಿ ಬಂದೂಕಿನ ಮೂಲಕ ಹೋರಾಟದಲ್ಲಿ ಭಾಗವಹಿಸಿದ್ದ ನಕ್ಸಲ್ ರು ಕಡೆಗೂ ಶರಣಾಗಿದ್ದಾರೆ.
ಹಿಂಸೆಯಿಂದ ಅಹಿಂಸೆಯ ಮಾರ್ಗ ಹಿಡಿದಿದ್ದಾರೆ. ಸಮ ಸಮಾಜದ ನಿಮಾರ್ಣದ ಕನಸು ಕಾಣುತ್ತಿದ್ದ ಹಲವರು ಇದೀಗ ಶರಣಾಗಿದ್ದಾರೆ.
ಶಾಂತಿಗಾಗಿ ನಾಗರಿಕ ವೇದಿಕೆ, 6 ಜನ ನಕ್ಸಲ್ ರನ್ನು ಕಾಡಿನಿಂದ ಜೈಲಿಗೆ, ಜೈಲಿನಿಂದ ನಾಡಿಗೆ ಬರುವಂತೆ ಮಾಡುವಲ್ಲಿ ಯಶಸ್ಸು ಸಾಧಿಸಿದ್ದಾರೆ.
ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯೆಯಾಗಿದ್ದ ಸಾಮಾಜಿಕ ಹೋರಾಟಗಾರ್ತಿ ಧಾರವಾಡದ ಡಾ. ಇಸ್ಬೇಲ್ಲಾ, ನಕ್ಸಲ್ ರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.