ಧಾರವಾಡದಲ್ಲಿಂದು ಅಪರೂಪದ ಕಾರ್ಯಕ್ರಮವೊಂದು ನಡೆಯಿತು. ಠಾಣೆಯ ಇನ್ಸಪೆಕ್ಟರ ಮಾರ್ಗದರ್ಶನದಲ್ಲಿ ನಡೆದ ಸಮಾಜಮುಖಿ ಕಾರ್ಯಕ್ರಮ ಇದಾಗಿತ್ತು.
ಓರ್ವ ಪೊಲೀಸ್ ಅಧಿಕಾರಿ ಆ ಠಾಣೆಯ ವ್ಯಾಪ್ತಿಯಲ್ಲಿ ಹೇಗೆ ಕೆಲಸ ಮಾಡಬೇಕು ಅನ್ನೋದನ್ನ ಇನ್ಸಪೆಕ್ಟರ ನಾಗೇಶ ಕಾಡದೇವರಮಠ ಇಂದು ತೋರಿಸಿಕೊಟ್ಟರು.
ಧಾರವಾಡ ಶಹರ ಠಾಣೆ ಇನ್ಸಪೆಕ್ಟರ ನಾಗೇಶ ಕಾಡದೇವರಮಠರ ಮಾರ್ಗದರ್ಶನದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.
ರಸೂಲಪುರ ಯಂಗ್ ಕಮೀಟಿಯ ಇನ್ನೂರಕ್ಕೂ ಹೆಚ್ಚು ಯುವಕರು ಇಂದು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಧಾರವಾಡ ಎ ಸಿ ಪಿ ಪ್ರಶಾಂತ ಸಿದ್ದನಗೌಡರ, ಇನ್ಸಪೆಕ್ಟರ ನಾಗೇಶ ಕಾಡದೇವರಮಠ, ಬಸವರಾಜ ಜಾಧವ,
ಶಾನವಾಜ ನಾಯಕವಾಡಿ, ವಾಸಿಂ ಬಾಡ, ಆಯಾಜ ಜಮಾದಾರ, ಇಜಾಜ ಜಮಾದಾರ, ವಾಹೀದ ಜಮಾದಾರ, ಅಮ್ಜದ್ ಖಾನ್ ಪಗಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.