Download Our App

Follow us

Home » ಶಿಕ್ಷಣ » ಧಾರವಾಡ ಜಿಲ್ಲೆಯಲ್ಲಿ ಪ್ರತಿ ವರ್ಷ 20 ಸಾವಿರ ಮಕ್ಕಳು ಶಾಲೆಗೆ ಬರೋದೇ ಇಲ್ಲಾ !

ಧಾರವಾಡ ಜಿಲ್ಲೆಯಲ್ಲಿ ಪ್ರತಿ ವರ್ಷ 20 ಸಾವಿರ ಮಕ್ಕಳು ಶಾಲೆಗೆ ಬರೋದೇ ಇಲ್ಲಾ !

ಸರ್ಕಾರ ಕಡ್ಡಾಯ ಶಿಕ್ಷಣ ಜಾರಿಗೆ ತಂದಿದ್ದರು ಪ್ರತಿ ವರ್ಷ 20 ಸಾವಿರ ವಿಧ್ಯಾರ್ಥಿಗಳು ಶಾಲೆಗೆ ಗೈರು ಹಾಜರಾಗುತ್ತಾರೆ. ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಪ್ರಮಾಣವು ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತ ಹೊರಟಿದೆ. 

ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಸರಿಸುಮಾರು 47,414 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿಲ್ಲ ಅನ್ನೋ ಮಾಹಿತಿ ಬೆಳಕಿಗೆ ಬಂದಿದೆ. ಅಲ್ಲದೆ ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ 20,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಗೈರುಹಾಜರಾಗುತ್ತ ಬಂದಿದ್ದಾರೆ. 

ಗೈರುಹಾಜರಿಗೆ ಕಾರಣಗಳು 

ಗೈರುಹಾಜರಿಗೆ ಕಾರಣವಾಗುವ ಮುಖ್ಯ ಅಂಶಗಳು ಅಂದರೆ, ಮನೆ ಶಾಲೆಯಿಂದ ದೂರ ಇರುವದು ಒಂದು ಕಾರಣವಾದರೆ, ಮನೆಗೆಲಸ, ಶಾಲಾ ಪರಿಸರ, ಅಲೆಮಾರಿ ಜೀವನಶೈಲಿ, ಮಕ್ಕಳು ಮತ್ತು ಪೋಷಕರಿಂದ ನಿರಾಸಕ್ತಿ, ತೀವ್ರ ಅಂಗವೈಕಲ್ಯ ಮತ್ತು ಕೌಟುಂಬಿಕ ಸಮಸ್ಯೆಗಳು ಮುಖ್ಯ ಅಂಶಗಳಾಗಿವೆ. 

ಧಾರವಾಡ ಜಿಲ್ಲೆಯಲ್ಲಿ ಕಳೆದ ವರ್ಷದ ಡಿಸೆಂಬರ್ ತಿಂಗಳಿನಿಂದ ಶಾಲೆ ಇಂದ ಹೊರಗೆ ಉಳಿದ ಮಕ್ಕಳ ಅಭಿಯಾನ ಆರಂಭವಾಗಿದ್ದು, 121 ಮಕ್ಕಳ ಪೈಕಿ ಕೇವಲ 73 ಮಕ್ಕಳು ಮಾತ್ರ ಶಾಲೆಯಿಂದ ಹೊರಗಿದ್ದಾರೆ ಎಂದು ಡಿ ಡಿ ಪಿ ಐ ಕೆಳದಿಮಠ ಕರ್ನಾಟಕ ಫೈಲ್ಸ್ ಗೆ ಮಾಹಿತಿ ನೀಡಿದ್ದಾರೆ. 

ಶಾಲೆಯಿಂದ ಹೊರಗೆ ಉಳಿದಿರುವ ಮಕ್ಕಳ ಬಗ್ಗೆ ಸರಿಯಾಗಿ ಸಮೀಕ್ಷೆ ಮಾಡದಿರುವದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಅಮೋಘ ಸಾಧನೆ. ರೈತನ ಮಗಳು ದೀಕ್ಷಾ ತಾಲೂಕಿಗೆ ಪ್ರಥಮ ಸ್ಥಾನ

ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ರೈತನ ಮಗಳು ದೀಕ್ಷಾ ಜಾಬಿನ್, ವಿಜ್ಞಾನ ವಿಭಾಗದಲ್ಲಿ ಅಮೋಘ ಸಾಧನೆ ಮಾಡಿದ್ದಾಳೆ. ನವಲಗುಂದ ಶಂಕರ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದ ದೀಕ್ಷಾ

Live Cricket

error: Content is protected !!
17:21